ಬೆಂಗಳೂರು: ಕೆಆರ್ ಮಾರುಕಟ್ಟೆ ಫ್ಲೈಓವರ್ ಮೇಲಿಂದ 10 ರೂ ಮುಖಬೆಲೆ ನೋಟು ಎಸೆದ ವ್ಯಕ್ತಿ; ಸಂಚಾರ ಅಸ್ತವ್ಯಸ್ತ
ಬೆಂಗಳೂರು: ಇಲ್ಲಿನ ಕೆಆರ್ ಮಾರುಕಟ್ಟೆಯ ಫ್ಲೈಓವರ್ ಮೇಲಿನಿಂದ ವ್ಯಕ್ತಿಯೊಬ್ಬ ಹಣ ಎಸೆದಿರುವ ಘಟನೆ ಮಂಗಳವಾರದಂದು ನಡೆದಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ. ವೀಡಿಯೊದಲ್ಲಿ, ಕಪ್ಪು ಶರ್ಟ್ ಧರಿಸಿರುವ ಫ್ಲೈಓವರ್‌ನಲ್ಲಿದ್ದ ಅರುಣ್ ಎಂದು ಗುರುತಿಸಲಾದ ವ್ಯಕ್ತಿಯೊಬ್ಬರು ಹಣವನ್ನು ಎಸೆಯುತ್ತಿರುವುದು ಕಂಡುಬಂದಿದೆ. ಆತ ಎಸೆದ ಹಣದಲ್ಲಿ 10 ರೂಪಾಯಿ ಮುಖಬೆಲೆಯ ನೋಟುಗಳಿದ್ದವು. ಕೂಡಲೇ ಫ್ಲೈಓವರ್ ಕೆಳಗೆ ಜಮಾಯಿಸಿದ ಜನರು ನೋಟುಗಳನ್ನು ಹೆಕ್ಕಲು ಆರಂಭಿಸಿದರು. ಹಣ ಹೆಕ್ಕುತ್ತಿದ್ದ ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟರು. ಇದರಿಂದಾಗಿ ಕೆಲ ನಿಮಿಷಗಳ ಕಾಲ ವಾಹನ […]