ಕುಂದಾಪುರ: ನದಿಗೆ ಹಾರಿದ ಉದ್ಯಮಿಯ ಮೃತದೇಹ ಪತ್ತೆ
ಕುಂದಾಪುರ: ಭಾನುವಾರ ಪಂಚಾಗಂಗಾವಳಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೊಟೇಲ್ ಉದ್ಯಮಿಯೋರ್ವರ ಮೃತದೇಹ ಸೋಮವಾರ ಬೆಳಿಗ್ಗೆ ಹೆಮ್ಮಾಡಿ ಸಮೀಪದ ಬುಗ್ರಿಕಡು ನದಿಯಲ್ಲಿ ಪತ್ತೆಯಾಗಿದೆ. ಮುಂಬೈಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಕುಂದಾಪುರ ಚಿಕನ್‌ಸಾಲ್ ರಸ್ತೆಯ ನಿವಾಸಿ ಕೆ.ಜಿ. ಗಣೇಶ್(೪೯) ಮೃತರು. ಗಣೇಶ್ ಭಾನುವಾರ ಸಂಜೆ ಆಟೋ ರಿಕ್ಷಾದಲ್ಲಿ ಬಂದು ಕುಂದಾಪುರ ಹೇರಿಕುದ್ರು ಸೇತುವೆಯಲ್ಲಿ ಇಳಿದಿದ್ದರು. ತನ್ನ ಆಧಾರ್‌ಕಾರ್ಡ್, ಪರ್ಸ್, ಚಪ್ಪಲಿಯನ್ನು ಸೇತುವೆ ದಂಡೆ ಮೇಲಿರಿಸಿ ಮೇಲಿನಿಂದ ಪಂಚಗಂಗಾವಳಿ ನದಿಗೆ ಧುಮುಕಿದ್ದರು. ಇದನ್ನು ನೋಡಿದ ಸ್ಥಳೀಯರು ನದಿಯಲ್ಲಿ ಹುಡುಕಾಟ ಆರಂಭಿಸಿದ್ದರು. […]