ಪತ್ರಕರ್ತರ ಸಮ್ಮೇಳನಕ್ಕೆ ತರಕಾರಿ ಕೊಡುಗೆ ನೀಡಿದ ಕುತ್ಲೂರು ಶಾಲಾ ಮಕ್ಕಳು 

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ  ಸಂಘದ ವತಿಯಿಂದ ಪತ್ರಕರ್ತರು ಗ್ರಾಮ ವಾಸ್ತವ್ಯ ಮಾಡಿದ ಕುತ್ಲೂರು ಸರಕಾರಿ ಶಾಲೆಯ ಮಕ್ಕಳು ಹಾಗೂ ಮುಖ್ಯ ಶಿಕ್ಷಕರು ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಪತ್ರಕರ್ತರ ಸಮ್ಮೇಳನದ ಊಟೋಪಚಾರಕ್ಕೆ  ಶಾಲೆಯಲ್ಲಿ ಬೆಳೆದ ತರಕಾರಿಗಳನ್ನು ಕೊಡುಗೆಯಾಗಿ ನೀಡಿದರು. ಶಾಲೆಯಲ್ಲಿ ಬೆಳೆಸಲಾದ ಸೌತೆಕಾಯಿ, ಅಲಸಂಡೆ, ಬದನೆ ಸೇರಿದಂತೆ ವಿವಿಧ ಬಗೆಯ ತರಕಾರಿಗಳನ್ನು  ಶಾಲೆಯ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಕರ್ತರ ಸಂಘದ ಪದಾಧಿಕಾರಿಗಳಿಗೆ ಹಸ್ತಾಂತರ ಮಾಡಿದರು. ಸಾವಯವ ರೀತಿಯಲ್ಲಿ ಬೆಳೆಸಿದ, […]