ಅನ್ಯ ಕೋಮಿನ ಯುವಕನ ಜೊತೆ ಹಿಂದೂ ಯುವತಿಯರ ಜಾಲಿ ರೈಡ್

ಬೆಳ್ತಂಗಡಿ: ಮಂಗಳೂರಿನ ಪ್ರತಿಷ್ಠಿತ ಕಾಲೇಜೊಂದರ ಮೂವರು ಹಿಂದೂ ವಿದ್ಯಾರ್ಥಿಗಳು ಮತ್ತು ಮೂವರು ಯುವಕರು ಹಾಗೂ ಒಬ್ಬ ಅನ್ಯ ಕೋಮಿನ ಯುವಕ ಬೆಳ್ತಂಗಡಿಯ ದಿಡುಪೆ ಸಮೀಪದ ಎರ್ಮಾಯಿ ಜಲಪಾತಕ್ಕೆ ಜಾಲಿ ರೈಡ್ ಹೋಗುತ್ತಿದ್ದ ಮಾಹಿತಿ ತಿಳಿದ ಹಿಂದೂ ಸಂಘಟನೆಯ ಕಾರ್ಯಕರ್ತರು ತಡೆದು ವಿಚಾರಿಸಿದ ಘಟನೆ ನಡೆದಿದೆ. ಇವರು ಮೋಜು ಮಸ್ತಿ ಮಾಡುವ ಉದ್ದೇಶದಿಂದ ಮಂಗಳೂರಿನಿಂದ ಬೈಕ್ ನಲ್ಲಿ ಎರ್ಮಾಯಿ ಫಾಲ್ಸ್ ಗೆ ಬಂದಿದ್ದಾರೆ ಎಂದು ತಿಳಿದುಬಂದಿದೆ.