ಐತಿಹಾಸಿಕ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಗೆ ಯುಎಸ್ ಬೆಂಬಲ: ರೈಲು-ಜಲಮಾರ್ಗದ ಮೂಲಕ ಸಂಪರ್ಕ
ನವದೆಹಲಿ: ಯುಎಸ್ ಅಧ್ಯಕ್ಷ ಜೋ ಬೈಡನ್ ಮತ್ತು G20 ಪಾಲುದಾರರು ಭಾರತವನ್ನು ಮಧ್ಯಪ್ರಾಚ್ಯ ಮತ್ತು ಅಂತಿಮವಾಗಿ ಯುರೋಪ್‌ನೊಂದಿಗೆ ಸಂಪರ್ಕಿಸುವ ರೈಲು ಮತ್ತು ಶಿಪ್ಪಿಂಗ್ ಕಾರಿಡಾರ್‌ಗಾಗಿ ಶನಿವಾರ ಯೋಜನೆಗಳನ್ನು ರೂಪಿಸಲು ಯೋಜಿಸಿದ್ದಾರೆ. ಇದು ಚೀನಾದ ಬೆಲ್ಟ್ ಎಂಡ್ ರೋಡ್ ಯೋಜನೆಯನ್ನು ಎದುರಿಸಲು ಅಮೇರಿಕಾ ಸಂಯುಕ್ತ ಸಂಸ್ಥಾನದ ನಿರ್ಣಾಯಕ ನಿರ್ಧಾರವಾಗಿದೆ ಎನ್ನಲಾಗಿದೆ. ಅಧ್ಯಕ್ಷ ಬೈಡೆನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸುಮಾರು ಒಂದು ಗಂಟೆಗಳ ಕಾಲ ಮಾತನಾಡಿದರು ಮತ್ತು ಅವರ ಚರ್ಚೆಯು ಮೂಲಸೌಕರ್ಯ ಮತ್ತು ಸಂವಹನಗಳಿಗೆ ಸಂಬಂಧಿಸಿದ “ಪ್ರಮುಖ […]
ಮೈಸೂರಿನ ಶೀಗಂಧದ ಪೆಟ್ಟಿಗೆಯಲ್ಲಿ ದಶದಾನ; ಪ್ರಯೋಗಾಲಯದಲ್ಲಿ ಬೆಳೆದ 7.5-ಕ್ಯಾರೆಟ್ ಹಸಿರು ವಜ್ರ: ಬೈಡನ್ ದಂಪತಿಗೆ ಮೋದಿ ಉಡುಗೊರೆ
ವಾಷಿಂಗ್ಟನ್: ಬುಧವಾರ ಶ್ವೇತಭವನದಲ್ಲಿ ಬೈಡನ್ ದಂಪತಿಗಳು ನೀಡಿದ ಖಾಸಗಿ ಔತಣಕೂಟಕ್ಕೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷ ಜೋ ಬಿಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರಿಗೆ ವಿಶೇಷ ಉಡುಗೊರೆಗಳನ್ನು ನೀಡಿದರು. ಜೈಪುರದ ಕುಶಲಕರ್ಮಿಯೊಬ್ಬರು ಕರಕುಶಲತೆಯಿಂದ ತಯಾರಿಸಿದ ‘ದಶ ದಾನ’ ಹೊಂದಿದ ವಿಶೇಷ ಶ್ರೀಗಂಧದ ಪೆಟ್ಟಿಗೆಯನ್ನು ಅಧ್ಯಕ್ಷ ಬೈಡೆನ್ ಅವರಿಗೆ ಪ್ರಧಾನಿ ಮೋದಿ ಉಡುಗೊರೆಯಾಗಿ ನೀಡಿದರು. ಕರ್ನಾಟಕದ ಮೈಸೂರಿನಿಂದ ತರಿಸಲಾದ ಶ್ರೀಗಂಧದ ಮರದ ಪೆಟ್ಟಿಗೆಯು ಸಂಕೀರ್ಣವಾಗಿ ಕೆತ್ತಲಾದ ಸಸ್ಯ ಮತ್ತು ಪ್ರಾಣಿಗಳ ಮಾದರಿಗಳನ್ನು ಹೊಂದಿದೆ. […]
26/11 ದಾಳಿಯ ಮುಖ್ಯ ಆರೋಪಿ ತಹವ್ವುರ್ ರಾಣಾ ಹಸ್ತಾಂತರಕ್ಕೆ ಯುಎಸ್ ಕೋರ್ಟ್ ಅಸ್ತು
ನವದೆಹಲಿ: 2008 ರ ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಭಾಗಿಯಾಗಿರುವ ಪಾಕಿಸ್ತಾನಿ ಮೂಲದ ಕೆನಡಾದ ಉದ್ಯಮಿ ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಅಮೇರಿಕಾ ಸರ್ಕಾರದ ಮೂಲಕ ಭಾರತ ಸರ್ಕಾರವು ಸಲ್ಲಿಸಿದ್ದ ಮನವಿಗೆ ಅಮೇರಿಕಾದ ನ್ಯಾಯಾಲಯವು ಒಪ್ಪಿಗೆ ನೀಡಿದೆ. ಹಸ್ತಾಂತರದ ದೃಷ್ಟಿಯಿಂದ ಜೂನ್ 10, 2020 ರಂದು, 62 ವರ್ಷದ ರಾಣಾನನ್ನು ತಾತ್ಕಾಲಿಕವಾಗಿ ಬಂಧಿಸುವಂತೆ ಭಾರತವು ದೂರು ಸಲ್ಲಿಸಿತು. ಬೈಡೆನ್ ಆಡಳಿತವು ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ಬೆಂಬಲಿಸಿ ಅನುಮೋದಿಸಿತು. “ನ್ಯಾಯಾಲಯವು ವಿನಂತಿಯನ್ನು ಬೆಂಬಲಿಸಿ ಮತ್ತು ವಿರೋಧವಾಗಿ ಸಲ್ಲಿಸಿದ ಎಲ್ಲಾ ದಾಖಲೆಗಳನ್ನು […]
ಇರಾನ್ ನಲ್ಲಿ ತಾರಕ್ಕೇರಿದ ಹಿಜಾಬ್ ವಿರೋಧಿ ಸಮರ: ತಿಂಗಳು ಕಳೆದರೂ ನಿಲ್ಲದ ಇರಾನಿ ಮಹಿಳೆಯರ ಪ್ರತಿಭಟನೆ
ತೆಹರಾನ್: ಸೆ.16 ರಂದು ಇರಾನ್ ನಲ್ಲಿ ಇರಾನಿ ಮಹಿಳೆಯರಿಂದ ಪ್ರಾರಂಭವಾದ ಹಿಜಾಬ್ ವಿರೋಧಿ ಪ್ರತಿಭಟನೆ ಒಂದು ತಿಂಗಳ ಅವಧಿಯನ್ನು ಪೂರ್ಣಗೊಳಿಸಿದೆ. ಈ ಮಧ್ಯೆ ಇರಾನ್ ನಲ್ಲಿ ಶುರುವಾದ ಪ್ರತಿಭಟನೆಗೆ ವಿಶ್ವದಾದ್ಯಂತದ ನಾಯಕರಿಂದ ಬೆಂಬಲ ವ್ಯಕ್ತವಾಗಿದೆ. ಅಮೇರಿಕಾದ ಅಧ್ಯಕ್ಷ ಜೋ ಬೈಡೆನ್ ಕೂಡಾ ಪ್ರತಿಭಟನಾ ನಿರತ ಮಹಿಳೆಯರ ಬೆಂಬಲಕ್ಕೆ ನಿಂತಿದ್ದಾರೆ. ಸೆಪ್ಟೆಂಬರ್ 16 ರಂದು 22 ವರ್ಷದ ಮಹ್ಸಾ ಅಮಿನಿ ಸಾವಿನ ನಂತರ ಇರಾನ್‌ನಲ್ಲಿ ಪ್ರತಿಭಟನೆಗಳು ಪ್ರಾರಂಭವಾದವು. ಮೊದಲು ಇರಾನ್ ಗೆ ಮಾತ್ರ ಸೀಮಿತವಾಗಿದ್ದ ಪ್ರತಿಭಟನೆ ಇದೀಗ ವಿಶ್ವದೆಲ್ಲೆಡೆ […]