ಆಗಸ್ಟ್ 5 ರಂದು ಮನೋವೈದ್ಯರ ಹುದ್ದೆಗಾಗಿ ನೇರ ಸಂದರ್ಶನ
ಉಡುಪಿ: ಪ್ರಸಕ್ತ ಸಾಲಿನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ-ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿಗಳ ಕಚೇರಿಯಲ್ಲಿ ಖಾಲಿ ಇರುವ ಮನೋವೈದ್ಯರ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಲು ಆಗಸ್ಟ್ 5 ರಂದು ಬೆಳಗ್ಗೆ 10.30 ಕ್ಕೆ ನಗರದ ಅಜ್ಜರಕಾಡು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ನೇರ ಸಂದರ್ಶನ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಮೂಲ ದಾಖಲೆಗಳೊಂದಿಗೆ ಸಂದರ್ಶನದಲ್ಲಿ ಹಾಜರಾಗಬಹುದಾಗಿದೆ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಸುಮೇರು ಇಂಟೀರಿಯರ್ ಡಿಸೈನರ್ ಎಂಡ್ ಕನ್ಸಲ್ಟಿಂಗ್ ಎಂಜಿನಿಯರ್ಸ್ ನಲ್ಲಿ ಉದ್ಯೋಗಾವಕಾಶ
ಉಡುಪಿ: ಇಲ್ಲಿನ ಸುಮೇರು ಇಂಟೀರಿಯರ್ ಡಿಸೈನರ್ ಎಂಡ್ ಕನ್ಸಲ್ಟಿಂಗ್ ಎಂಜಿನಿಯರ್ಸ್ ನಲ್ಲಿಆರ್ಕಿಟೆಕ್ಟ್, ಬಿಇ-ಸಿವಿಲ್, ಡಿಪ್ಲೊಮಾ-ಸಿವಿಲ್, ಆಟೋಕ್ಯಾಡ್ ಮತ್ತು 3ಡಿ ಡ್ರಾಫ್ಟಿಂಗ್ ನಲ್ಲಿ ಪರಿಣತಿ ಹೊಂದಿರುವ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳಿವೆ. ವಿಳಾಸ: 1 ನೇ ಮಹಡಿ, ಮಾಡರ್ನ್ ಟವರ್, ಕಿದಿಯೂರು ಹೋಟೇಲ್ ಬಳಿ, ಉಡುಪಿ. ನಿಮ್ಮ ಸಿವಿ ಗಳನ್ನು 9632901600 ಅಥವಾ [email protected] ಗೆ ಕಳುಹಿಸಿ.
ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿ ಸಂಘಟಕರ ಹುದ್ದೆ ಖಾಲಿ
ಉಡುಪಿ: ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿ ಖಾಲಿ ಇರುವ ಸಿ ವೃಂದದ ಕಲ್ಯಾಣ ಸಂಘಟಕರು-14 ಹುದ್ದೆಗಳ ನೇಮಕಾತಿಗೆ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಭೂ ಸೇನೆಯ ಜೆ.ಸಿ.ಓ ರ‍್ಯಾಂಕ್ ಹಾಗೂ ವಾಯುಪಡೆ ಮತ್ತು ನೌಕಾಪಡೆಯ ತತ್ಸಮಾನ ರ‍್ಯಾಂಕ್‌ನಿಂದ ಸೇವಾ ನಿವೃತ್ತಿ ಹೊಂದಿರುವ ಮಾಜಿ ಸೈನಿಕರು ರಾಜ್ಯ ಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ 20 ದಿನಗಳ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬೆಂಗಳೂರು ದೂರವಾಣಿ ಸಂಖ್ಯೆ : 080-25589459 ಅನ್ನು […]
ಜು. 27 ರಂದು ಪೈ ಇಂಟರ್ ನ್ಯಾಷ್‌ನಲ್ ನಲ್ಲಿ ನೇರ ಸಂದರ್ಶನ
ಉಡುಪಿ: ಜಿಲ್ಲಾ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ಜುಲೈ 27 ರಂದು ಬೆಳಗ್ಗೆ 10.30 ಕ್ಕೆ ನಗರದ ಕೋರ್ಟ್ ರೋಡ್ ಶ್ರೀ ದೇವರಾಜ್ ಟವರ್ಸ್ ಬಳಿಯ ಪೈ ಇಂಟರ್ ನ್ಯಾಷ್‌ನಲ್ ನಲ್ಲಿ ನೇರ ಸಂದರ್ಶನ ನಡೆಯಲಿದೆ. ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಬಿ.ಕಾಂ, ಡಿಪ್ಲೋಮಾ ಹಾಗೂ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ, ಸ್ವ-ವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಜಿಲ್ಲಾಧಿಕಾರಿ […]
ಮಂಗಳೂರು: ಜು. 25 ರಂದು ಭೀಮಾ ಜ್ಯುವೆಲ್ಲರ್ಸ್ ನಲ್ಲಿ ನೇರ ಸಂದರ್ಶನ
ಮಂಗಳೂರು: ರಾಜ್ಯದ ಪ್ರಖ್ಯಾತ ಚಿನ್ನಾಭರಣ ಮಳಿಗೆ ಭೀಮಾ ಜ್ಯುವೆಲ್ಲರ್ಸ್ ಬೆಂಗಳೂರು ಶಾಖೆಯಲ್ಲಿ ಹಲವಾರು ಉದ್ಯೋಗಗಳು ಖಾಲಿ ಇದ್ದು, 21 ರಿಂದ 35 ವರ್ಷ ವಯಸ್ಸಿನ ಕನ್ನಡ, ತೆಲುಗು , ತಮಿಳು, ತುಳು, ಹಿಂದಿ, ಮಲೆಯಾಳಂ ಮತ್ತು ಇಂಗ್ಲಿಷ್ ಮುಂತಾದ ಭಾಷೆಗಳಲ್ಲಿ ಹಿಡಿತವಿರುವ ಅನುಭವಿ ಅಭ್ಯರ್ಥಿಗಳು ಬೇಕಾಗಿದ್ದಾರೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಆಕರ್ಷಕ ವೇತನ, ಇ.ಎಸ್.ಐ ಅಥವಾ ವೈದ್ಯಕೀಯ ವಿಮೆ, ಆಹಾರ ವಸತಿ ಸೌಲಭ್ಯ ಒದಗಿಸಲಾಗುವುದು. ಸಂದರ್ಶನ ನಡೆಯುವ ಸ್ಥಳ: ಹೋಟೆಲ್ ದೀಪಾ ಕಂಫರ್ಟ್ಸ್, ಎಂ.ಜಿ ರಸ್ತೆ, ಕೊಡಿಯಾಲ್ ಬೈಲ್, […]