ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಾಗಿ ಅರ್ಜಿ ಆಹ್ವಾನ
ಉಡುಪಿ: ಜಿಲ್ಲೆಯ ಉಡುಪಿ ತಾಲೂಕಿನ ಅಂಬಲಪಾಡಿ ಗ್ರಾಮ ಪಂಚಾಯತ್‌ನ ಗ್ರಂಥಾಲಯದಲ್ಲಿ ಖಾಲಿ ಇರುವ ಗ್ರಂಥಾಲಯ ಮೇಲ್ವಿಚಾರಕರು -1 ಹುದ್ದೆ (ಪ್ರವರ್ಗ-2(ಎ)-ಗ್ರಾಮೀಣ ಅಭ್ಯರ್ಥಿ) ಹಾಗೂ ಕುಂದಾಪುರ ತಾಲೂಕಿನ ಗುಲ್ವಾಡಿ (ಸಾಮಾನ್ಯ ಅಭ್ಯರ್ಥಿ-ಮಹಿಳೆ) ಮತ್ತು ಯಡಮೊಗೆ ಗ್ರಾಮ ಪಂಚಾಯತ್‌ನ (ಪ್ರವರ್ಗ-2(ಬಿ)-ಗ್ರಾಮೀಣ ಅಭ್ಯರ್ಥಿ) ಗ್ರಂಥಾಲಯಗಳಲ್ಲಿ ಖಾಲಿ ಇರುವ ಗ್ರಂಥಾಲಯ ಮೇಲ್ವಿಚಾರಕರು-ತಲಾ 1 ಹುದ್ದೆ ಸೇರಿದಂತೆ ಒಟ್ಟು 3 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 25 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ […]
ಮಂಜುನಾಥ್ ಕಣ್ಣಿನ ಆಸ್ಪತ್ರೆಯಲ್ಲಿ ಸೇಲ್ಸ್ ಸ್ಟಾಫ್ ಮತ್ತು ಬಿಲ್ಲಿಂಗ್ ಹುದ್ದೆಗೆ ಅಭ್ಯರ್ಥಿ ಬೇಕಾಗಿದ್ದಾರೆ
ಉಡುಪಿ: ಬನ್ನಂಜೆಯಲ್ಲಿರುವ ಮಂಜುನಾಥ್ ಕಣ್ಣಿನ ಆಸ್ಪತ್ರೆಯಲ್ಲಿ ಸೇಲ್ಸ್ ಸ್ಟಾಫ್ ಮತ್ತು ಬಿಲ್ಲಿಂಗ್ ಹುದ್ದೆ ಖಾಲಿ ಇದ್ದು ಆಸಕ್ತರು 9880972393 ಅನ್ನು ಸಂಪರ್ಕಿಸಬಹುದು.
ಅ. 6 -7 ರಂದು ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳ
ಮೂಡಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುವ ಬೃಹತ್ ಉದ್ಯೋಗ ಮೇಳ ‘ಆಳ್ವಾಸ್ ಪ್ರಗತಿ-2023ʼ ಅಕ್ಟೋಬರ್ 6 ಹಾಗೂ 7ರಂದು ಮೂಡುಬಿದಿರೆಯ ವಿದ್ಯಾಗಿರಿ ಕಾಲೇಜು ಆವರಣದಲ್ಲಿ ನಡೆಯಲಿದೆ. ಆಳ್ವಾಸ್ ಪ್ರತಿಷ್ಠಾನವು 2007 ರಿಂದ ಬೃಹತ್ ಉದ್ಯೋಗ ಮೇಳ ಆಳ್ವಾಸ್ ಪ್ರಗತಿ ಯನ್ನು ನಡೆಸಿಕೊಂಡು ಬರುತ್ತಿದೆ. ಇದು ಆಳ್ವಾಸ್ ಪ್ರಗತಿಯ 13ನೇ ಆವೃತ್ತಿಯಾಗಿದ್ದು, ಒಟ್ಟಾರೆಯಾಗಿ 200 ಕ್ಕೂ ಅಧಿಕ ಉದ್ಯೋಗದಾತ ಕಂಪೆನಿಗಳು ಭಾಗವಹಿಸುವ ನಿರೀಕ್ಷೆ ಇದೆ. ಅರ್ಹತೆ: ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ವೈದ್ಯಕೀಯ, ಅರೆ ವೈದ್ಯಕೀಯ, ಇಂಜಿನಿಯರಿಂಗ್, […]
ಸೆ. 22 ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ನೇರ ಸಂದರ್ಶನ
ಉಡುಪಿ: ಜಿಲ್ಲೆಯ ರಾಷ್ಟೀಯ ಆರೋಗ್ಯ ಅಭಿಯಾನ ಹಾಗೂ ನಮ್ಮ ಕ್ಲಿನಿಕ್‌ನಲ್ಲಿ ಖಾಲಿ ಇರುವ ಹೆರಿಗೆ ತಜ್ಞರು -01 (ಕಾರ್ಕಳ ತಾಲೂಕು ಸಾರ್ವಜನಿಕ ಆಸ್ಪತ್ರೆ), ವೈದ್ಯಾಧಿಕಾರಿಗಳು-04 (ನಮ್ಮ ಕ್ಲಿನಿಕ್ ಟಿ.ಟಿ ರೋಡ್ ಕುಂದಾಪುರ, ನಮ್ಮ ಕ್ಲಿನಿಕ್ ಮರೀನಾಪುರ ಕಾರ್ಕಳ, ತಾಲೂಕು ಸಾರ್ವಜನಿಕ ಆಸ್ಪತ್ರೆ ಕುಂದಾಪುರ ಹಾಗೂ ಕಾರ್ಕಳ ತಾಲೂಕು ಸಾರ್ವಜನಿಕ ಆಸ್ಪತ್ರೆ),ಆಡಿಯೋಮೆಟ್ರಿಕ್ ಅಸಿಸ್ಟೆಂಟ್ -01 ಹುದ್ದೆ, ಯಂಗ್ ಹಿಯರಿಂಗ್ ಇಂಪೈರ್ಡ್ ಚಿಲ್ಡ್ರನ್ ಇನ್ ಸ್ಟ್ರಕ್ಟರ್-01 ಹುದ್ದೆ (ಜಿಲ್ಲಾ ಆಸ್ಪತ್ರೆ) ಹಾಗೂ ಎಲ್.ಹೆಚ್.ವಿ -01 (ಉಡುಪಿಯ ನಗರ ಆರೋಗ್ಯ ಕೇಂದ್ರ) […]
ಸೆ. 21 ರಂದು ಮ್ಯಾಟ್ರಿಕ್ಸ್ ಆಟೋ ವೆಂಚರ್ಸ್ ನಲ್ಲಿ ನೇರ ಸಂದರ್ಶನ
ಉಡುಪಿ: ಜಿಲ್ಲಾ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ಸೆಪ್ಟಂಬರ್ 21 ರಂದು ಬೆಳಗ್ಗೆ 10.30 ಕ್ಕೆ ಮ್ಯಾಟ್ರಿಕ್ಸ್ ಆಟೋ ವೆಂಚರ್ಸ್ (ಹೋಂಡಾ ಟು ವಿಲ್ಲರ್), ಮ್ಯಾಟ್ರಿನ್ ದಿಯಾ, ಶಿವಳ್ಳಿ, ಕುಂಜಿಬೆಟ್ಟು, ಉಡುಪಿ ಇಲ್ಲಿ ನೇರ ಸಂದರ್ಶನ ನಡೆಯಲಿದೆ. ಐ.ಟಿ.ಐ, ಡಿಪ್ಲೋಮಾ ಹಾಗೂ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ, ಸ್ವವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್ಪ್ರತಿ ಯೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಜಿಲ್ಲಾಧಿಕಾರಿ […]