ಮಕ್ಕಳ ರಕ್ಷಣಾ ಘಟಕದಲ್ಲಿ ಲೀಗಲ್ ಕಂ ಪ್ರೋಭೇಷನ್ ಆಫೀಸರ್ ಹಾಗೂ ಲೆಕ್ಕಿಗರ ಹುದ್ದೆ ಖಾಲಿ
ಉಡುಪಿ: ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಉಡುಪಿ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ತೆರವಿರುವ ಲೀಗಲ್ ಕಂ ಪ್ರೋಭೇಷನ್ ಆಫೀಸರ್ ಹಾಗೂ ಲೆಕ್ಕಿಗರು ತಲಾ 1 ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಹೊಂದಿರುವ, ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಸರ್ಕಾರಿ, ಎನ್.ಜಿ.ಓ ಹಾಗೂ ಕಾನೂನು ವಿಷಯಗಳೊಂದಿಗೆ ಕನಿಷ್ಟ 2 ವರ್ಷಗಳ ಕೆಲಸ ಮಾಡಿದ ಅನುಭವ ಮತ್ತು ಮಹಿಳೆಯರ ಹಾಗೂ ಮಕ್ಕಳ ಹಕ್ಕು ಮತ್ತು ರಕ್ಷಣೆ ಸಮಸ್ಯೆಗಳ ಕುರಿತು […]
ಜುಲೈ 6ರಂದು ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ಉದ್ಯೋಗ ಮೇಳ
ಉಡುಪಿ: ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಉಡುಪಿ ವತಿಯಿಂದ ಜುಲೈ 6ರಂದು ಕಾಲೇಜಿನ ಕ್ಯಾಂಪಸ್ ನಲ್ಲಿ ಉದ್ಯೋಗ ಮೇಳ ನಡೆಯಲಿದೆ. ಕೆಲಸ ಮಾಡಲು ಸಿದ್ಧರಿರುವ ಪದವಿ, ಡಿಪ್ಲೊಮಾ,ಸ್ನಾತಕೋತ್ತರ ಪದವಿ ಪಡೆದಿರುವ ಅಥವಾ ಅಂತಿಮ ವರ್ಷದಲ್ಲಿ ಕಲಿಯುತ್ತಿರುವ ಯಾರೂ ಬೇಕಾದರೂ ಭಾಗವಹಿಸಬಹುದಾಗಿದೆ.
ರೋಬೋಸಾಫ್ಟ್ ಟೆಕ್ನಾಲಜಿಯಲ್ಲಿ ಟ್ರಾವೆಲ್ ಅಸೋಸೊಯೇಟ್ ಹುದ್ದೆಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ
ಉಡುಪಿಯ ಪ್ರಖ್ಯಾತ ತಂತ್ರಜ್ಞಾನ ಸಂಸ್ಥೆಯಾದ ರೋಬೋಸಾಫ್ಟ್ ಟೆಕ್ನಾಲಜಿಯಲ್ಲಿ ಟ್ರಾವೆಲ್ ಅಸೋಸೊಯೇಟ್ ಹುದ್ದೆ ಖಾಲಿ ಇದ್ದು, ಯಾವುದೇ ಪದವಿ ಪೂರೈಸಿದ ಟ್ರಾವೆಲ್ ಮತ್ತು ಟೂರಿಸಂ ನಲ್ಲಿ 2 ರಿಂದ 5 ವರ್ಷ ಅನುಭವ ಇರುವ ಅಭ್ಯರ್ಥಿಗಳು ಬೇಕಾಗಿದ್ದಾರೆ. ಟ್ರಾವೆಲ್ ಮತ್ತು ಟೂರಿಸಂ ಕ್ಷೇತ್ರದ ಒಳಹೊರಗನ್ನು ಬಲ್ಲ, ನಿರರ್ಗಳವಾಗಿ ಮಾತನಾಡಬಲ್ಲ, ಸಂವಹನ ಕಲೆ ಇರುವ, ಇಂಗ್ಲೀಷ್ ಭಾಷಾ ಹಿಡಿತವಿರುವ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸಬಹುದು. ರೆಸ್ಯೂಮ್ ಕಳುಹಿಸಬೇಕಾದ ವಿಳಾಸ: [email protected]
ಮಂಗಳೂರು: ಲುಲು ಗ್ರೂಪ್ ನಲ್ಲಿ ಉದ್ಯೋಗ ನೇಮಕಾತಿಗಾಗಿ ಫರ್ನಾಂಡಿಸ್ ಗ್ರೂಪ್ ವತಿಯಿಂದ ನೇರ ಸಂದರ್ಶನ
ಮಂಗಳೂರು: ಏಷ್ಯಾದ ಅತಿ ದೊಡ್ಡ ಹೈಪರ್ ಮಾರ್ಕೆಟ್ ಗ್ರೂಪ್ ಆದಂತಹ ಲುಲು ಗ್ರೂಪ್ ನಲ್ಲಿ ಯುವಕರಿಗಾಗಿ ಉದ್ಯೋಗಾವಕಾಶಗಳಿದ್ದು, ಅಭ್ಯರ್ಥಿಗಳ ಆಯ್ಕೆಗಾಗಿ ಮಂಗಳೂರಿನ ಫರ್ನಾಂಡಿಸ್ ಅಸೋಸಿಯೇಟ್ಸ್ ಕಚೇರಿಯಲ್ಲಿ ಜೂನ್ 22 ಮತ್ತು 23 ರಂದು ಬೆಳಿಗ್ಗೆ 9 ರಿಂದ ಸಂಜೆ 6 ರ ನಡುವೆ ನೇರ ಸಂದರ್ಶನಗಳನ್ನು ಏರ್ಪಡಿಸಲಾಗಿದೆ ಎಂದು ಫರ್ನಾಂಡಿಸ್ ಗ್ರೂಪ್ ನ ಅಧ್ಯಕ್ಷ ವಿಲ್ಸನ್ ಫೆರ್ನಾಂಡಿಸ್ ಹೇಳಿದರು. ಅವರು ಮಂಗಳವಾರದಂದು ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಯುಎಇ, ಕತಾರ್, ಬಹ್ರೇನ್, ಮಸ್ಕತ್, ಸೌದಿ ಅರೇಬಿಯಾ, ಮಲೇಷ್ಯಾ […]
ಜೂನ್ 15 ರಂದು ರಜತಾದ್ರಿಯಲ್ಲಿ ಮಿನಿ ಉದ್ಯೋಗ ಮೇಳ
ಉಡುಪಿ: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ಜೂನ್ 15 ರಂದು ಬೆಳಗ್ಗೆ 10.30 ಕ್ಕೆ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಬಿ.ಕಾಂ, ಬಿ.ಇ ಇಂಜಿನಿಯರಿಂಗ್ ಮತ್ತು ಡಿಪ್ಲೋಮಾ ಹಾಗೂ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ, ಸ್ವ-ವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್ಪ್ರತಿಯೊಂದಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ […]