ಜೆ.ಇ.ಇ ಮೈನ್ ಮೊದಲ ಹಂತದ ಫಲಿತಾಂಶ: ಜ್ಞಾನಸುಧಾದ ಏಳು ಮಂದಿಗೆ 99ಕ್ಕೂ ಅಧಿಕ ಪರ್ಸಂಟೈಲ್; 98ಕ್ಕಿಂತ ಅಧಿಕ ಪರ್ಸಂಟೈಲ್ ಪಡೆದ 18 ವಿದ್ಯಾರ್ಥಿಗಳು

ಕಾರ್ಕಳ : ರಾಷ್ಟ್ರಮಟ್ಟದಲ್ಲಿ ಇಂಜಿನಿಯರಿಂಗ್ ವಿಭಾಗಕ್ಕೆ ಎನ್.ಟಿ.ಎ ನಡೆಸುವ ಜೆಇಇ ಮೈನ್ಸ್ ಪ್ರಥಮ ಹಂತದ ಪರೀಕ್ಷೆ ಬರೆದ 11 ಲಕ್ಷದ 70 ಸಾವಿರದ ಮೂವತ್ತಾರು ವಿದ್ಯಾರ್ಥಿಗಳಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಐತಿಹಾಸಿಕ ಫಲಿತಾಂಶಕ್ಕೆ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳಾದ ಪ್ರಿಯಾಂಶ್ ಎಸ್.ಯು 99.79 ಪರ್ಸಂಟೈಲ್, ಬಿಪಿನ್ ಜೈನ್ ಬಿ.ಎಂ. 99.75 ಪರ್ಸಂಟೈಲ್, ಚಿರಂತನ ಜೆ.ಎ. 99.70 ಪರ್ಸಂಟೈಲ್, ನಿಮೇಶ್ ಆರ್. ಆಚಾರ್ಯ 99.38 ಪರ್ಸಂಟೈಲ್, ಕ್ಷೀರಾಜ್.ಎಸ್ ಆಚಾರ್ಯ 99.28 ಪರ್ಸಂಟೈಲ್, ಶ್ರೀದ ಕಾಮತ್ 99.11 ಪರ್ಸಂಟೈಲ್ ಹಾಗೂ ರಿಷಿತ್‌ […]

ಅಮೇರಿಕಾದ ಪ್ರತಿಷ್ಠಿತ ನೋವಾ ಸಯನ್ಸ್ ಪಬ್ಲಿಷರ್ಸ್ ನಲ್ಲಿ ಜ್ಞಾನಸುಧಾ ಕಾಲೇಜಿನ ಡಾ. ಪ್ರಜ್ವಲ್ ಕುಲಾಲ್ ಅವರ ಸಂಶೋಧನಾ ಲೇಖನ ಪ್ರಕಟ

ಕಾರ್ಕಳ : ಕಾರ್ಕಳ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪ್ರಜ್ವಲ್ ಕುಲಾಲ್‌ ಅವರ ಸಂಶೋಧನಾ ಲೇಖನವು ಅಮೇರಿಕಾದ ಪ್ರತಿಷ್ಠಿತ ನೋವಾ ಸಯನ್ಸ್ ಪಬ್ಲಿಷರ್ಸ್ನಲ್ಲಿ ಪ್ರಕಟಗೊಂಡಿದೆ. ನೀರಿನ ಶುದ್ಧೀಕರಣ ಕ್ಷೇತ್ರದಲ್ಲಿ ಸಸ್ಯಜನಕ ಪಾಲಿಸ್ಯಾಕರೈಡ್‌ಗಳನ್ನು ನ್ಯಾನೋ ಕಾಂಪೊಸಿಟ್‌ಗಳಾಗಿ ಪರಿಣಾಮಕಾರಿಯಾಗಿ ಬಳಸುವ ಸಂಶೋಧನೆಯನ್ನು ಗುರುತಿಸಿ 2022ರಲ್ಲಿ ಅಮೇರಿಕಾದ ಪ್ರತಿಷ್ಠಿತ ನೋವಾ ಸಯನ್ಸ್ ಪಬ್ಲಿಷರ್ಸ್ ತಮ್ಮ ವಿಜ್ಞಾನ ಸಂಬಂಧಿ ಸಂಪಾದನಾ ಕೃತಿಯ ಒಂದು ಅಧ್ಯಾಯಕ್ಕೆ ಲೇಖನಾ ಪ್ರಬಂಧವನ್ನು ಇವರಿಂದ ಅಹ್ವಾನಿಸಿದ್ದರು. ಇರಾನಿನ ಊರ್ಮಿಯಾ ವಿವಿಯ ಕೆಮಿಕಲ್ ಇಂಜಿನಿಯರಿಂಗ್ […]

ಜ್ಞಾನಸುಧಾ ಶ್ರೀ ಮಹಾಗಣಪತಿ ದೇವಸ್ಥಾನದ ಹತ್ತನೇ ಪ್ರತಿಷ್ಠಾ ಮಹೋತ್ಸವದ ಸಂಭ್ರಮ: 38 ಲಕ್ಷ ರೂ ಮೊತ್ತದ ವಿದ್ಯಾರ್ಥಿ ವೇತನ ವಿತರಣೆ

ಕಾರ್ಕಳ: ದಿವ್ಯವಾದ ಸನ್ನಿಧಾನದಿಂದ ಯಶಸ್ವಿಯಾಗಬಹುದು. ಸಾಧನೆ ಮಾಡುತ್ತಾ ಎತ್ತರಕ್ಕೆ ಏರಬಹುದು. ಇತರ ಪ್ರಾಣಿಗಳಿಗೆ ಬುದ್ದಿಶಕ್ತಿ ಸೀಮಿತವಾಗಿದ್ದರೆ, ಭಗವಂತನು ಮನುಷ್ಯನಿಗೆ ಕೊಟ್ಟ ಅಸಾಧಾರಣ ಶಕ್ತಿಯೆಂದರೆ ಕ್ರೀಯಾಶೀಲವಾಗಿರುವ ಕೈಬೆರಳುಗಳು ಮತ್ತು ಅಪೂರ್ವವಾಗಿರುವ ಬುದ್ದಿ ಶಕ್ತಿ. ವಿದ್ಯೆಯ ಜೊತೆಗೆ ಬುದ್ದಿ ಇದ್ದರೆ ಪ್ರಪಂಚಕ್ಕೆ ಪೂರಕವಾಗುತ್ತದೆ. ಬೌದ್ಧಿಕ ಶಕ್ತಿಯನ್ನು, ಮನಶಕ್ತಿಯನ್ನು ಸತ್ಕರ್ಮದಿಂದ ಸದ್ವಿನಿಯೋಗ ಮಾಡಿದಾಗ ಶ್ರೇಷ್ಠವಾಗಿರುವುದನ್ನು ಪ್ರಪಂಚಕ್ಕೆ ನೀಡಬಹುದು ಎಂದು ಕುಕ್ಕೆ ಸುಬ್ರಹ್ಮಣ್ಯ ಮಠಾಧಿಪತಿ ಶ್ರೀ ವಿದ್ಯಾಪ್ರಸನ್ನ ತೀರ್ಥಸ್ವಾಮಿಜಿ ಹೇಳಿದರು. ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿರುವ ಶ್ರೀ ಮಹಾಗಣಪತಿ ದೇವಸ್ಥಾನದ […]

ಮರು ಮೌಲ್ಯಮಾಪನ ಜ್ಞಾನಸುಧಾದ ಇಬ್ಬರು ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದಲ್ಲಿ ನಾಲ್ಕನೇ ರ‍್ಯಾಂಕ್

ಕಾರ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆಯ ಹೊರಡಿಸಿದ ಮರು ಮೌಲ್ಯಮಾಪನ ಫಲಿತಾಂಶದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾದ ಶರಣ್ಯ ಎಸ್. ಹೆಗ್ಡೆ ಇಂಗ್ಲೀಷ್‌ನಲ್ಲಿ 2, ಕನ್ನಡದಲ್ಲಿ1 ಹೆಚ್ಚುವರಿ ಅಂಕ ಪಡೆದು ಒಟ್ಟು 594 ಅಂಕದೊಂದಿಗೆ ರಾಜ್ಯಕ್ಕೆ ನಾಲ್ಕನೇ ಹಾಗೂ ಉಡುಪಿ ಜಿಲ್ಲೆಗೆ ದ್ವಿತೀಯ ರ‍್ಯಾಂಕ್ ಪಡೆದಿದ್ದಾರೆ. ಆಕಾಶ್ ಪೈ ಇಂಗ್ಲೀಷ್‌ನಲ್ಲಿ 3, ವ್ಯವಹಾರ ಅಧ್ಯಯನದಲ್ಲಿ 2 ಅಂಕಗಳನ್ನು ಹೆಚ್ಚುವರಿ ಪಡೆದು ಒಟ್ಟು 593 ಅಂಕಗಳನ್ನು ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ರೋಹಿತ್ ಹೆಗ್ಡೆ […]

ನವೀನತೆಯನ್ನು ಸ್ವೀಕರಿಸುವ ಮನೋಭಾವ ವಿದ್ಯಾರ್ಥಿಗಳದ್ದಾಗಿರಬೇಕು: ಎ.ಎಸ್.ಎನ್ ಹೆಬ್ಬಾರ್

ಕಾರ್ಕಳ: ವಿದ್ಯಾರ್ಥಿ ಜೀವನ ಕಾಲೇಜಿನಲ್ಲೆ ಮುಗಿಯುವುದಿಲ್ಲ ಬದಲಿಗೆ ಜೀವನದುದ್ದಕ್ಕೂ ನಡೆಯುವಂತದ್ದು. ಹೊಸತನ್ನು ಸ್ವಾಗತಿಸುವ ಮನೋಭಾವ ಇರಬೇಕು. ಕಣ್ಣು–ಕಿವಿಗಳಿಗೆ ಸದಾ ಕಾತುರತೆ ಇರಬೇಕು. ನವೀನತೆಯನ್ನು ಸ್ವೀಕರಿಸುವ ಮನೋಭಾವ ಚೈತನ್ಯವಾಗಿ ಜೀವಂತವಾಗಿದ್ದಾಗ ವ್ಯಕ್ತಿಯು ಯಶಸ್ವಿಯಾಗಲು ಸಾಧ್ಯ ಎಂದು ಹಿರಿಯ ನ್ಯಾಯವಾದಿ ಎ.ಎಸ್.ಎನ್ ಹೆಬ್ಬಾರ್ ಅಭಿಪ್ರಾಯಪಟ್ಟರು. ಅವರು ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಜ್ಞಾನ ಸಂಭ್ರಮ-2022 ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೈದ್ಯರು ಹಾಗೂ ವಕೀಲರ ವೃತ್ತಿಗೆ ನಿವೃತ್ತಿ ಎಂಬುದಿಲ್ಲ. ಕಾಲಕಾಲಕ್ಕೆ ಕಾನೂನು- ಕಾಯಿದೆಗಳು ಬದಲಾಗುತ್ತಿರುತ್ತದೆ. ಹೊಸ-ಹೊಸ ರೋಗಗಳು ಉಲ್ಬಣಿಸಿದಂತೆ […]