ಪ್ರತಿಯೊಬ್ಬರಲ್ಲೂ ನಾವು ಭಾರತೀಯರೆಂಬ ಅಭಿಮಾನ ಇರಬೇಕು: ಐ.ಎನ್.ಎಸ್ ಕಮಾಂಡರ್ ಅಶ್ವಿನ್ ರಾವ್
ಕಾರ್ಕಳ: ದೇಶದ ನಾಗರಿಕನಾಗಿ ಸ್ವಯಂ ಪ್ರೇರಣೆಯಿಂದ ಜವಾಬ್ದಾರಿಗಳನ್ನು ವಹಿಸಿಕೊಂಡು ದೇಶದ ಏಳಿಗೆಗೆ ಕೈ ಜೋಡಿಸಬೇಕು. ದೇಶ ಅಂದ್ರೆ ನಾವು, ನಾವು ಅಂದ್ರೆ ದೇಶ ಎಂಬ ಭಾವ ಮೊಳಗಬೇಕು. ನಾನು ಭಾರತೀಯ ಎಂಬ ಹೆಮ್ಮೆ ಗರ್ವ, ಅಭಿಮಾನ ಇರಬೇಕೆಂದು ಕೊಚ್ಚಿಯ ಐ.ಎನ್.ಎಸ್. ಶಾರದಾ ಕಮಾಂಡರ್ ಅಶ್ವಿನ್.ಎಂ.ರಾವ್ ಅಭಿಪ್ರಾಯಪಟ್ಟರು. ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆದ 74 ನೇ ಗಣರಾಜ್ಯೋತ್ಸವದಲ್ಲಿ ಧ್ವಜಹಾರಿಸಿ ಮಾತನಾಡಿದರು. ಶಿಸ್ತುಬದ್ಧ ವಿದ್ಯಾರ್ಥಿ ಜೀವನವು ಯಶಸ್ಸಿನೆಡೆಗೆ ಕೊಂಡೊಯ್ಯುತ್ತದೆ. ಜವಾಬ್ದಾರಿಯುತ ಮನಸ್ಥಿತಿಯು ಎಂತಹ ಪ್ರತಿಕೂಲ ಸ್ಥಿತಿಯನ್ನು […]
ಜ್ಞಾನಸುಧಾ ಸಂಸ್ಥಾಪಕರ ದಿನಾಚರಣೆ: ವಿದ್ಯಾರ್ಥಿಗಳಿಗೆ ಸನ್ಮಾನ; ರಾಷ್ಟ್ರ ರಕ್ಷಣಾ ನಿಧಿಗೆ ದೇಣಿಗೆ ಅರ್ಪಣೆ
ಗಣಿತನಗರ : ಬುದ್ದಿವಂತಿಕೆ ನೈತಿಕತೆಯ ಬಳ್ಳಿಯಾಗಿದೆ. ಎಲ್ಲಿಯವರೆಗೆ ನೈತಿಕತೆಯಿಂದ ಕೂಡಿದ ಬುದ್ದಿವಂತಿಕೆ ಇರುವುದಿಲ್ಲವೋ ಅಲ್ಲಿಯ ತನಕ ನಾವು ಯಾರಿಗೂ ಪ್ರಯೋಜನವಾಗುವುದಿಲ್ಲ. ಹೆಣವಾಗುವ ಮುನ್ನಇತರರ ಬಾಳಿಗೆ ನಾವೆಷ್ಟು ಹಣತೆಯನ್ನು ಹಚ್ಚಿದ್ದೇವೆ ಅನ್ನೋದು ಮುಖ್ಯವೇ ವಿನಃ ನಮ್ಮ ಪದವಿ, ಅಂತಸ್ತುಅಲ್ಲಎಂದು ಶಿವಮೊಗ್ಗದ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಡೀನ್ ಡಾ. ಕೃಷ್ಣ ಪ್ರಸಾದ್ ಎಂ.ಎಸ್. ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದ ಗಣಿತನಗರ ಕ್ರೀಡಾಂಗಣದಲ್ಲಿಅಜೆಕಾರ್ ಪದ್ಮಗೋಪಾಲ್ಎಜ್ಯುಕೇಶನ್ ಟ್ರಸ್ಟ್ನ ವತಿಯಿಂದ ನಡೆದ ಸಂಸ್ಥಾಪಕರ ದಿನಾಚರಣೆ ಹಾಗೂ ರಾಷ್ಟ್ರೀಯ ಗಣಿತ […]
ವಿದ್ಯಾರ್ಥಿ ದೆಸೆಯಲ್ಲಿ ಕ್ರೀಡಾಸ್ಫೂರ್ತಿಯನ್ನು ತುಂಬುವುದು ಅಗತ್ಯ: ಶಾಸಕ ಕೆ.ರಘಪತಿ ಭಟ್
ಉಡುಪಿ: ವಿದ್ಯಾರ್ಥಿ ದೆಸೆಯಲ್ಲಿ ಕ್ರೀಡಾಸ್ಫೂರ್ತಿಯನ್ನು ತುಂಬುವುದು ಅಗತ್ಯ. ಹೊಸತನದ ಚಿಂತನೆಯೊಂದಿಗೆ, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪದವಿಪೂರ್ವ ವಿಭಾಗದಲ್ಲಿ ನಡೆಯುತ್ತಿರುವ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ದಾಖಲಾಗುವ ಕೂಟ ದಾಖಲೆಯನ್ನು ಸಮತೂಕವಾಗಿ ದಾಖಲಿಸುವ ನಿಟ್ಟಿನಲ್ಲಿ ಫೋಟೋ ಫಿನಿಶಿಂಗ್ ಬಳಸುತ್ತಿರುವುದು ಅಭಿನಂದನಾರ್ಹ ಎಂದು ಶಾಸಕ ಕೆ.ರಘಪತಿ ಭಟ್ ಅಭಿಪ್ರಾಯಪಟ್ಟರು. ಅವರು ಕರ್ನಾಟಕ ಸರ್ಕಾರ ಪದವಿಪೂರ್ವ ಶಿಕ್ಷಣ ಇಲಾಖೆ, ರಜತ್ರಾದಿ,ಮಣಿಪಾಲ, ಉಡುಪಿ, ಉಡುಪಿ ಜ್ಞಾನಸುಧಾ ಪದವಿಪೂರ್ವ ಕಾಲೇಜು, ನಾಗಬನ ಕ್ಯಾಂಪಸ್ ಇವರ ಸಂಯುಕ್ತ ಆಶ್ರಯದಲ್ಲಿ ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣ ಅಜ್ಜರಕಾಡು, ಉಡುಪಿ ಇಲ್ಲಿ ಆಯೋಜಿಸಿದ್ದ […]
ನೀಟ್ ಮೊದಲ ಸುತ್ತಿನ ಆಯ್ಕೆಯಲ್ಲಿ ಜ್ಞಾನಸುಧಾ ಕಾಲೇಜಿನ 93 ವಿದ್ಯಾರ್ಥಿಗಳಿಗೆ ಎಂ.ಬಿ.ಬಿ.ಎಸ್ ಗೆ ಪ್ರವೇಶ
ಕಾರ್ಕಳ: ರಾಷ್ಟ್ರಮಟ್ಟದಲ್ಲಿ ಎಂ.ಬಿ.ಬಿ.ಎಸ್ ಹಾಗೂ ಇತರ ವೈದ್ಯಕೀಯ ಪ್ರವೇಶಕ್ಕಾಗಿ ನಡೆಸುವ ನೀಟ್-2022ರ ಮೊದಲ ಸುತ್ತಿನ ಆಯ್ಕೆ ಪ್ರಕ್ರಿಯೆಯಲ್ಲಿ ಜ್ಞಾನಸುಧಾ ಕಾಲೇಜಿನ 93 ವಿದ್ಯಾರ್ಥಿಗಳು ರಾಜ್ಯದ ವಿವಿಧ ಪ್ರತಿಷ್ಠಿತ ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ. ವೈದ್ಯಕೀಯ ರಂಗದ ಶೈಕ್ಷಣಿಕ ಕ್ಷೇತ್ರ ಎನಿಸಿಕೊಂಡ ಕರಾವಳಿ ಭಾಗದ ಕೆ.ಎಂ.ಸಿ ಮಂಗಳೂರು ಹಾಗೂ ಕೆ.ಎಂ.ಸಿ ಮಣಿಪಾಲ, ಬಿ.ಎಂ.ಸಿ.ಬೆಂಗಳೂರು, ಎಂ.ಎಂ.ಸಿ. ಮೈಸೂರ್, ಕಿಮ್ಸ್ ಹುಬ್ಬಳ್ಳಿ, ಸಿಮ್ಸ್ ಶಿವಮೊಗ್ಗ ಸಹಿತ ಕರ್ನಾಟಕದ ವಿವಿಧ ಮೆಡಿಕಲ್ ಕಾಲೇಜುಗಳಿಗೆ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. 93 ವಿದ್ಯಾರ್ಥಿಗಳಲ್ಲಿ 59 ಬಾಲಕ ಹಾಗೂ […]
ತ್ರೋಬಾಲ್ ಪಂದ್ಯಾಟ: ಜ್ಞಾನಸುಧಾ ಬಾಲಕಿಯರ ತಂಡ ಪ್ರಥಮ; ಬಾಲಕರ ತಂಡ ದ್ವಿತೀಯ ಸ್ಥಾನ
ಕಾರ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ವಿದ್ಯಾವರ್ಧಕ ಪಿಯು ಕಾಲೇಜು ಮುಂಡ್ಕೂರು ಜಂಟಿ ಆಶ್ರಯದಲ್ಲಿ ನಡೆದ ಕಾರ್ಕಳ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಭಾಗವಹಿಸಿ ಗಣಿತ ನಗರದ ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜಿನ ಬಾಲಕಿಯರ ತಂಡ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿದೆ. ಜ್ಞಾನಸುಧಾ ಬಾಲಕರ ತಂಡವು ದ್ವಿತೀಯ ಸ್ಥಾನವನ್ನು ಪಡೆದು, ತಂಡದ ವಿದ್ಯಾರ್ಥಿಗಳಾದ ಸನತ್ ಪಿದೈ, ಪ್ರತೀಕ್, ಮತ್ತು ಅಂಕಿತ್ ಜಿಲ್ಲಾ ಮಟ್ಟದಲ್ಲಿ ನಡೆಯುವ ಬಾಲಕರ ತಂಡವನ್ನು ಪ್ರತಿನಿಧಿಸಲಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ಕು.ಸ್ವಾತಿ […]