ಜ್ಞಾನಸುಧಾ ಕಾಲೇಜಿನಲ್ಲಿ ಎನ್.ಎಸ್.ಎಸ್. ಕಾರ್ಯಚಟುವಟಿಕೆಗಳ ಉದ್ಘಾಟನೆ
ಕಾರ್ಕಳ: ಪಠ್ಯ ಶಿಕ್ಷಣದ ಜೊತೆಗೆ ಎನ್.ಎಸ್.ಎಸ್ ನಂತಹ ಪಠ್ಯೇತರ ಚಟುವಟಿಕೆಗಳು ನಮ್ಮ ಶೈಕ್ಷಣಿಕ ಜೀವನದಲ್ಲಿ ಜೀವನ ಕೌಶಲ್ಯಗಳನ್ನು ಕಲಿಸಿಕೊಡುತ್ತದೆ ಎಂದು ಜ್ಞಾನಸುಧಾ ವಾಣಿಜ್ಯ ವಿಭಾಗದ ಹಳೆವಿದ್ಯಾರ್ಥಿಗಳಾದ ಸಿ.ಎ. ರಘುರಾಮ್ ಪ್ರಭು ಹೇಳಿದರು. ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜಿನ ಎನ್.ಎಸ್.ಎಸ್. ಕಾರ್ಯಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಎನ್.ಎಸ್.ಎಸ್.ನ ವಿವಿಧ ಚಟುವಟಿಕೆಗಳು ಶೈಕ್ಷಣಿಕ ಜೀವನದ ನಂತರ ನಮ್ಮ ವೃತ್ತಿ ಜೀವನಕ್ಕೆ, ಸಾಮಾಜಿಕ ಬದುಕಿಗೆ ಸಹಕಾರಿಯಾಗುತ್ತದೆ. ವಾಣಿಜ್ಯ ವಿಭಾಗದ ಸ್ಪರ್ಧಾತ್ಮಕ ಪ್ರಪಂಚಕ್ಕೆ ನಾವು ಕೌಶಲ್ಯಭರಿತರಾಗಿ ತೆರೆದುಕೊಳ್ಳಬೇಕಾಗಿದೆ ಎಂದರು. ಸಿಎ […]
ಜೆ ಇ.ಇ ಅಡ್ವಾನ್ಸ್ ಫಲಿತಾಂಶ: ಜ್ಞಾನಸುಧಾ ಕಾಲೇಜಿಗೆ ಹತ್ತು ಸಾವಿರದೊಳಗೆ 10 ರ‍್ಯಾಂಕ್
ಕಾರ್ಕಳ : ರಾಷ್ಟ್ರಮಟ್ಟದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆಗಳ (ಐ.ಐ.ಟಿ) ಪ್ರವೇಶಕ್ಕೆ ನಡೆದಿದ್ದ ಜೆ.ಇ.ಇ ಅಡ್ವಾನ್ಸ್ನ ಫಲಿತಾಂಶ ಭಾನುವಾರ ಪ್ರಕಟಗೊಂಡಿದ್ದು ಜ್ಞಾನಸುಧಾಕ್ಕೆ 10 ಸಾವಿರದೊಳಗಿನ 10 ರ‍್ಯಾಂಕುಗಳು ಬಂದಿರುತ್ತದೆ. ಜನರಲ್ ಕೆಟಗರಿಯಲ್ಲಿ ವಿದ್ಯಾರ್ಥಿಗಳಾದ ಧನ್ವಿತ್ ನಾಯಕ್ 3918ನೇ ರ‍್ಯಾಂಕ್, ಪ್ರಣವ್ ಗುಜ್ಜರ್ 5601ನೇ ರ‍್ಯಾಂಕ್, ಸಮೃದ್ಧ್ನೆಲ್ಲಿ 5769ನೇ ರ‍್ಯಾಂಕ್ ಹಾಗೂ ಜನರಲ್ ಇ.ಡಬ್ಲು.ಎಸ್ ಕೆಟಗರಿಯಲ್ಲಿ 715ನೇ ರ‍್ಯಾಂಕ್, ಒ.ಬಿ.ಸಿ-ಎನ್.ಸಿ.ಎಲ್ ಕೆಟಗರಿಯಲ್ಲಿ ಸಾಯಿ ಲಿಖಿತ್ ರೆಡ್ಡಿ 3947 ನೇ ರ‍್ಯಾಂಕ್, ಅಮೃತ್ ಗೌಡ ಎಂ. ಪಾಟೀಲ್ 4117 ನೇ ರ‍್ಯಾಂಕ್, […]
ಪರಿಷ್ಕೃತ ಕೆ-ಸಿಇಟಿ ಫಲಿತಾಂಶ: ಜ್ಞಾನಸುಧಾ ಕಾಲೇಜಿಗೆ ಎರಡು ರ‍್ಯಾಂಕ್
ಕಾರ್ಕಳ : ಇತ್ತೀಚೆಗೆ ಹೊರಡಿಸಿದ ಸಾಮಾನ್ಯ ಪ್ರವೇಶ ಪರೀಕ್ಷೆ ಕೆ-ಸಿಇಟಿ ಪರೀಕ್ಷೆಯ ಫಲಿತಾಂಶದಲ್ಲಿ ತಾಂತ್ರಿಕ ದೋಷದಿಂದ ಕೆಲ ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿತ್ತು. ಆ ಪರಿಷೃತ ಫಲಿತಾಂಶವು ಪ್ರಕಟಗೊಂಡಿದ್ದು, ಇಂಜಿನಿಯರಿಂಗ್ ವಿಭಾಗದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ನಿಶಾಂತ್ ಎನ್ ಹೆಗ್ಡೆ 1072(G55) ನೇ ರ‍್ಯಾಂಕ್ ಹಾಗೂ ಸಾತ್ವಿಕ್ ಬಿ.ಸಿ 1387(G55) ನೇ ರ‍್ಯಾಂಕ್ ಪಡೆಯುವುದರ ಮೂಲಕ ಜ್ಞಾನಸುಧಾದ 2 ಸಾವಿರದೊಳಗಿನ ರ‍್ಯಾಂಕ್‌ಗಳ ಸಂಖ್ಯೆ 43ಕ್ಕೆ ಏರಿಕೆಯಾಗಿದೆ. ಜೊತೆಗೆ ಕಾಲೇಜಿನ 24 ವಿದ್ಯಾರ್ಥಿಗಳಿಗೆ ಕೆ-ಸಿಇಟಿ ಇಂಜಿನಯರಿಂಗ್‌ನಲ್ಲಿ ಸಾವಿರದೊಳಗಿನ […]
ಕಾರ್ಕಳ: ಅಜೆಕಾರ್ ಪದ್ಮ ಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ
ಕಾರ್ಕಳ: ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿಗೆ ದಾಖಲಾದ ವಿದ್ಯಾರ್ಥಿಗಳಿಗೆ ನಡೆದ ವಿದ್ಯಾರ್ಥಿವೇತನ ಅರ್ಹತಾ ಪರೀಕ್ಷೆಯಲ್ಲಿ ಒಟ್ಟು ದಾಖಲಾತಿಯ ಶೇ10 ರಷ್ಟು ವಿದ್ಯಾರ್ಥಿಗಳಿಗೆ 2023-24 ನೇ ಸಾಲಿನ ಪ್ರಥಮ ಪಿಯುಸಿ ಓರಿಯಂಟೇಶನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವೇತನ ನೀಡಲಾಯಿತು. ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜಿಗೆ ದಾಖಲಾದ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಹಾಗೂ ಸ್ಥಳೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಅರ್ಹತಾ ಪರೀಕ್ಷೆಯನ್ನು ನಡೆಸಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ […]
ಗಣಿತನಗರ: ದಿನೇಶ್‌ಎಂ.ಕೊಡವೂರು ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ನೂತನ ಸಿಇಒ
ಕಾರ್ಕಳ: ಗಣಿತನಗರದಲ್ಲಿರುವ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ನೂತನ ಮುಖ್ಯಕಾರ್ಯನಿರ್ವಹಣಾ ಅಧಿಕಾರಿಯಾಗಿ ಕಾರ್ಕಳ ಜ್ಞಾನಸುಧಾ ಪಿ.ಯು.ಕಾಲೇಜಿನ ಪ್ರಾಂಶುಪಾಲ ದಿನೇಶ್. ಎಂ.ಕೊಡವೂರು ಅವರಿಗೆ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಿಲಾಗಿದೆ ಎಂದು ಅಜೆಕಾರ್ ಪದ್ಮಗೋಪಾಲ್ ಎಜ್ಯಕೇಶನ್‌ಟ್ರಸ್ಟ್ನ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿಯವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಮಾರ್ಚ್1 ರಂದು ನಡೆದ ಆಡಳಿತ ಮಂಡಳಿ ಮತ್ತು ಎಲ್ಲಾ 240 ಮಂದಿ ಸಂಸ್ಥೆಯ ಉದ್ಯೋಗಿಗಳ ಸಭೆಯಲ್ಲಿ ದಿನೇಶ್‌ಎಂ.ಕೊಡವೂರು ಅಧಿಕಾರ ಸ್ವೀಕರಿಸಿದರು.