ನವೀನತೆಯನ್ನು ಸ್ವೀಕರಿಸುವ ಮನೋಭಾವ ವಿದ್ಯಾರ್ಥಿಗಳದ್ದಾಗಿರಬೇಕು: ಎ.ಎಸ್.ಎನ್ ಹೆಬ್ಬಾರ್
ಕಾರ್ಕಳ: ವಿದ್ಯಾರ್ಥಿ ಜೀವನ ಕಾಲೇಜಿನಲ್ಲೆ ಮುಗಿಯುವುದಿಲ್ಲ ಬದಲಿಗೆ ಜೀವನದುದ್ದಕ್ಕೂ ನಡೆಯುವಂತದ್ದು. ಹೊಸತನ್ನು ಸ್ವಾಗತಿಸುವ ಮನೋಭಾವ ಇರಬೇಕು. ಕಣ್ಣು–ಕಿವಿಗಳಿಗೆ ಸದಾ ಕಾತುರತೆ ಇರಬೇಕು. ನವೀನತೆಯನ್ನು ಸ್ವೀಕರಿಸುವ ಮನೋಭಾವ ಚೈತನ್ಯವಾಗಿ ಜೀವಂತವಾಗಿದ್ದಾಗ ವ್ಯಕ್ತಿಯು ಯಶಸ್ವಿಯಾಗಲು ಸಾಧ್ಯ ಎಂದು ಹಿರಿಯ ನ್ಯಾಯವಾದಿ ಎ.ಎಸ್.ಎನ್ ಹೆಬ್ಬಾರ್ ಅಭಿಪ್ರಾಯಪಟ್ಟರು. ಅವರು ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಜ್ಞಾನ ಸಂಭ್ರಮ-2022 ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೈದ್ಯರು ಹಾಗೂ ವಕೀಲರ ವೃತ್ತಿಗೆ ನಿವೃತ್ತಿ ಎಂಬುದಿಲ್ಲ. ಕಾಲಕಾಲಕ್ಕೆ ಕಾನೂನು- ಕಾಯಿದೆಗಳು ಬದಲಾಗುತ್ತಿರುತ್ತದೆ. ಹೊಸ-ಹೊಸ ರೋಗಗಳು ಉಲ್ಬಣಿಸಿದಂತೆ […]