ಅತಿ ಕಡಿಮೆ ಬೆಲೆಯ ‘ಜಿಯೊಫೋನ್‌ ನೆಕ್ಸ್ಟ್‌’ ಸ್ಮಾರ್ಟ್‌ಫೋನ್‌ ದೀಪಾವಳಿಗೆ ಬಿಡುಗಡೆ

ನವದೆಹಲಿ: ಗೂಗಲ್‌ ಜೊತೆಗೂಡಿ ಜಿಯೊ ಕಂಪೆನಿ ಅತಿ ಕಡಿಮೆ ಬೆಲೆಯ ‘ಜಿಯೊಫೋನ್‌ ನೆಕ್ಸ್ಟ್‌’ ಸ್ಮಾರ್ಟ್‌ಫೋನ್‌ ಅನ್ನು ತಯಾರಿಸಿದ್ದು, ಇದನ್ನು ದೀಪಾವಳಿಗೆ ಬಿಡುಗಡೆ ಮಾಡುವುದಾಗಿ ಜಿಯೊ ಕಂಪನಿಯು ತಿಳಿಸಿದೆ. ಈ ಸ್ಮಾರ್ಟ್‌ಫೋನ್‌ ಶುಕ್ರವಾರ ಬಿಡುಗಡೆ ಮಾಡಬೇಕಿತ್ತು. ಆದರೆ, ಬಿಡುಗಡೆ ದಿನಾಂಕ ಮುಂದೂಡಲಾಗಿದೆ ಎಂದು ಕಂಪೆನಿ ಹೇಳಿದೆ. 2ಜಿ ಯಿಂದ 4ಜಿ ಸಂಪರ್ಕಕ್ಕೆ ಅಪ್‌ಗ್ರೇಡ್‌ ಆಗಲು ಬಯಸುವವರಿಗೆ ಈ ಸ್ಮಾರ್ಟ್‌ಫೋನ್‌ ಸೂಕ್ತವಾಗಿದೆ. ಆದರೆ, ಇದರ ಬೆಲೆ ಎಷ್ಟಿರಲಿದೆ ಎನ್ನುವ ಮಾಹಿತಿಯನ್ನು ಕಂಪನಿ ನೀಡಿಲ್ಲ.