ಆದಾಯ ಹೆಚ್ಚಿಸುವ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ಕೆಲಸವಾಗಲಿ:ಡಾ. ಜಯಮಾಲ
ಉಡುಪಿ : ಪ್ರವಾಸೋದ್ಯಮ ಅತೀ ಹೆಚ್ಚು ಪ್ರಚಾರ ಪಡೆದು ಜನರಿಗೆ ಪ್ರಪಂಚದ ಯಾವುದೇ ಮೂಲೆಯಲ್ಲಾದರೂ ಪ್ರತಿ ಕ್ಷಣದಲ್ಲೂ ಪ್ರವಾಸೋದ್ಯಮದ ಮಾಹಿತಿಯನ್ನು ನೀಡಿ ಸೆಳೆಯುವಂತಾಗಬೇಕು. ಮುಂದಿನ ದಿನಗಳಲ್ಲಿ ಎಷ್ಟು ಜನರನ್ನು ತಲುಪುತ್ತೇವೆಯೋ ಅಷ್ಟು ವೇಗವಾಗಿ ಪ್ರವಾಸೋದ್ಯಮ ಬೆಳೆಯುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಹೇಳಿದರು. ಅವರು ಬುಧವಾರ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಉಡುಪಿ ಹಾಗೂ ಮಲ್ಪೆ ಅಭಿವೃದ್ಧಿ ಸಮಿತಿ(ರಿ)ರವರ ಸಹಯೋಗದಲ್ಲಿ ರಜತಾದ್ರಿಯ […]