ಡೈಮಂಡ್ ಲೀಗ್ ಪಂದ್ಯ: ಮೊದಲ ಸುತ್ತಿನಲ್ಲಿ 88.67 ಮೀ ಎಸೆತದೊಂದಿಗೆ ಗೆಲುವು ದಾಖಲಿಸಿದ ನೀರಜ್ ಚೋಪ್ರಾ
ಡೈಮಂಡ್ ಲೀಗ್ ಪಂದ್ಯದ ಮೊದಲ ಸುತ್ತಿನಲ್ಲಿ ಒಲಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಮೊದಲ ಗೆಲುವು ದಾಖಲಿಸಿ ಭಾರತೀಯರು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಕಳೆದ ವರ್ಷ 2022 ಡೈಮಂಡ್ ಲೀಗ್ ಫೈನಲ್ ಟ್ರೋಫಿಯನ್ನು ಗೆದ್ದಿದ್ದ ಚೋಪ್ರಾ, ಶುಕ್ರವಾರ ರಾತ್ರಿ ಕತಾರ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಘಟಾನುಘಟಿಗಳನ್ನು ಸೋಲಿಸಲು 88.67 ಮೀ ಅತ್ಯುತ್ತಮ ಎಸೆತದೊಂದಿಗೆ ಸೀಸನ್-ಆರಂಭದ ಮೊದಲ ಸುತ್ತನ್ನು ಗೆದ್ದಿದ್ದಾರೆ. ಇದು ತುಂಬಾ ಕಠಿಣ ಗೆಲುವು, ಆದರೆ ನನಗೆ ಸಂತೋಷವಾಗಿದೆ, ಇದು ನನಗೆ ಉತ್ತಮ ಆರಂಭವಾಗಿದೆ” ಎಂದು ಚೋಪ್ರಾ ಹೇಳಿದ್ದಾರೆ. […]
ರಾಜ್ಯ ಮಟ್ಟದ ಜೂನಿಯರ್ ವಿಭಾಗದ ಈಟಿ ಎಸೆತ: ವೆಂಕಟರಮಣ ಕಾಲೇಜಿನ ಓಂಕಾರ್ ಕಾಮತ್ ಗೆ ಕಂಚಿನ ಪದಕ
ಕುಂದಾಪುರ: ಕರ್ನಾಟಕ ರಾಜ್ಯ ಜೂನಿಯರ್ ಹಾಗೂ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ -2022 ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಜೂನಿಯರ್ ವಿಭಾಗದ ಈಟಿ ಎಸೆತದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಓಂಕಾರ್ ಕಾಮತ್ ಕಂಚಿನ ಪದಕ ಪಡೆಯುವುದರ ಮೂಲಕ ಕೀರ್ತಿಶಾಲಿಯಾಗಿದ್ದಾರೆ. ಸಾಧನೆಗೈದ ವಿದ್ಯಾರ್ಥಿಯನ್ನು ಕಾಲೇಜಿನ ಆಡಳಿತ ಮಂಡಳಿ , ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.
ಅಮೇರಿಕಾದ ಒರೆಗಾನ್‌ನಲ್ಲಿ ಚೊಚ್ಚಲ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆದ ನೀರಜ್ ಚೋಪ್ರಾ
ಅಮೇರಿಕಾದ ಒರೆಗಾನ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಪುರುಷರ ಜಾವೆಲಿನ್ ಥ್ರೋ ನಲ್ಲಿ 88.39 ಮೀಟರ್‌ಗಳ ಎಸೆತದೊಂದಿಗೆ ಭಾರತ ನೀರಜ್ ಚೋಪ್ರಾ ಫೈನಲ್ ಗೆ ಅರ್ಹತೆ ಪಡೆದಿದ್ದಾರೆ. ಒಲಿಂಪಿಕ್ ಚಿನ್ನದ ಪದಕ ವಿಜೇತ ಚೋಪ್ರಾ, ಅರ್ಹತಾ ಸುತ್ತಿನ ಮೊದಲ ಎಸೆತದಲ್ಲೇ ಫೈನಲ್‌ನ ತಮ್ಮ ಸ್ಥಾನವನ್ನು ಭದ್ರಪಡಿಸಿದ್ದಾರೆ. ಅರ್ಹತಾ ಸುತ್ತಿನ ಎ ಗುಂಪಿನಲ್ಲಿ ಚೋಪ್ರಾ ಮೊದಲಿಗರಾಗಿ ಜಾವಲಿನ್ ಎಸೆದಿದ್ದಾರೆ. ನಾಳೆ ಮುಂಜಾನೆ ನಡೆಯಲಿರುವ ಫೈನಲ್‌ನಲ್ಲಿ 24 ವರ್ಷ ವಯಸ್ಸಿನ ಚೋಪ್ರಾ ಸ್ಪರ್ಧಿಸಲಿದ್ದಾರೆ. ನೀರಜ್ ಜೊತೆಗೆ ರೋಹಿತ್ ಯಾದವ್ ಕೂಡ […]