ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮಾಂತ್ರಿಕ ಪಂಡಿತ್ ಜಸ್‌ರಾಜ್ ನಿಧನ 

ನವದೆಹಲಿ: ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮಾಂತ್ರಿಕ ಪಂಡಿತ್ ಜಸ್‌ರಾಜ್ (90) ಇಂದು ನ್ಯೂಜೆರ್ಸಿಯಲ್ಲಿ  ನಿಧನರಾಗಿದ್ದಾರೆ. ಅವರು 80 ವರ್ಷಗಳಿಗಿಂತಲೂ ಹೆಚ್ಚು ಕಾಲ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದು, ಅಪಾರ ಕೊಡುಗೆ ನೀಡಿದ್ದಾರೆ. ಮಹಾನ್ ಗಾಯಕ ಜಸ್‌ರಾಜ್  ಪದ್ಮಶ್ರೀ , ಪದ್ಮಭೂಷಣ್ ಮತ್ತು ಪದ್ಮವಿಭೂಷಣ್ ಪ್ರಶಸ್ತಿಗೆ ಭಾಜನರಾಗಿದ್ದರು. ಜಸ್‌ರಾಜ್ ಅವರು 1930ರ ಜನವರಿ 28ರಂದು ಹರ್ಯಾಣದಲ್ಲಿ ಜನಿಸಿದ್ದರು.  ಶಾಸ್ತ್ರೀಯ ಮತ್ತು ಸೆಮಿ ಕ್ಲಾಸಿಕಲ್ ಸಂಗೀತದಲ್ಲಿ ಮೇರು ಗಾಯಕರಾಗಿದ್ದರು.  ಭಾರತ , ಕೆನಡಾ ಮತ್ತು ಅಮೆರಿಕಾದಲ್ಲಿ  ಸಂಗೀತ ಪಾಠ […]