ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮಾಂತ್ರಿಕ ಪಂಡಿತ್ ಜಸ್‌ರಾಜ್ ನಿಧನ 

ನವದೆಹಲಿ: ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮಾಂತ್ರಿಕ ಪಂಡಿತ್ ಜಸ್‌ರಾಜ್ (90) ಇಂದು ನ್ಯೂಜೆರ್ಸಿಯಲ್ಲಿ  ನಿಧನರಾಗಿದ್ದಾರೆ.
ಅವರು 80 ವರ್ಷಗಳಿಗಿಂತಲೂ ಹೆಚ್ಚು ಕಾಲ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದು, ಅಪಾರ ಕೊಡುಗೆ ನೀಡಿದ್ದಾರೆ. ಮಹಾನ್ ಗಾಯಕ ಜಸ್‌ರಾಜ್  ಪದ್ಮಶ್ರೀ , ಪದ್ಮಭೂಷಣ್ ಮತ್ತು ಪದ್ಮವಿಭೂಷಣ್ ಪ್ರಶಸ್ತಿಗೆ ಭಾಜನರಾಗಿದ್ದರು.
ಜಸ್‌ರಾಜ್ ಅವರು 1930ರ ಜನವರಿ 28ರಂದು ಹರ್ಯಾಣದಲ್ಲಿ ಜನಿಸಿದ್ದರು.  ಶಾಸ್ತ್ರೀಯ ಮತ್ತು ಸೆಮಿ ಕ್ಲಾಸಿಕಲ್ ಸಂಗೀತದಲ್ಲಿ ಮೇರು ಗಾಯಕರಾಗಿದ್ದರು.  ಭಾರತ , ಕೆನಡಾ ಮತ್ತು ಅಮೆರಿಕಾದಲ್ಲಿ  ಸಂಗೀತ ಪಾಠ ಹೇಳಿಕೊಡುತ್ತಿದ್ದರು.
ಗಣ್ಯರ ಸಂತಾಪ:
ಪಂಡಿತ್ ಜಸರಾಜ್ ಅವರ ನಿಧನವು ಭಾರತೀಯ ಸಾಂಸ್ಕೃತಿಕ ಕ್ಷೇತ್ರವನ್ನು ಮೌನವಾಗಿಸಿದೆ. ಇಡೀ ಸಂಗೀತ ರಂಗ ಖಾಲಿಯಾದ ಭಾವ ಮೂಡಿದೆ. ಅವರ ಗಾಯನ ಅತ್ಯುತ್ತಮವಾಗಿತ್ತು ಮಾತ್ರವಲ್ಲ, ಅವರು ಹಲವಾರು ಗಾಯಕರಿಗೆ ಅಸಾಧಾರಣ ಮಾರ್ಗದರ್ಶಕರಾಗಿದ್ದರು ಎಂದು ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.