ಬ್ರಹ್ಮಾಂಡದ ನಕ್ಷತ್ರ ನರ್ಸರಿಯ ಕಣ್ಮನ ಸೆಳೆಯುವ ಚಿತ್ರಗಳನ್ನು ಹಂಚಿ ಮೊದಲನೆ ವರ್ಷ ಆಚರಿಸಿದ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕ!!
ಜುಲೈ 12 ರಂದು ಜೇಮ್ಸ್ ವೆಬ್ ಬಾಹ್ಯಾಕಾಶ ಟೆಲಿಸ್ಕೋಪ್(JWST) ಅವಲೋಕನಗಳ ಒಂದು ವರ್ಷದ ವಾರ್ಷಿಕೋತ್ಸವವನ್ನು ಆಚರಿಸಲು, ನಾಸಾ ಹಿಂದೆಂದೂ ನೋಡಿರದ ರೀತಿಯಲ್ಲಿ ನಕ್ಷತ್ರದ ಜನ್ಮವನ್ನು ತೋರಿಸುವ ಅದ್ಭುತ ಚಿತ್ರವನ್ನು ಬಿಡುಗಡೆ ಮಾಡಿದೆ. ಹೊಸ ಜೇಮ್ಸ್ ವೆಬ್ ಬಾಹ್ಯಾಕಾಶ ಟೆಲಿಸ್ಕೋಪ್ ಚಿತ್ರವು ಭೂಮಿಗೆ ಸಮೀಪವಿರುವ Rho Ophiuchi ಕ್ಲೌಡ್ ಕಾಂಪ್ಲೆಕ್ಸ್ ನ ನಕ್ಷತ್ರ-ರೂಪಿಸುವ ಪ್ರದೇಶದ ಚಿತ್ರವನ್ನು ಸೆರೆಹಿಡಿದಿದೆ. ಸಣ್ಣ ಮತ್ತು ತುಲನಾತ್ಮಕವಾಗಿ ಶಾಂತಿಯುತ ನಾಕ್ಷತ್ರಿಕ ನರ್ಸರಿಯಾಗಿದ್ದರೂ, ಶಕ್ತಿಯುತ ದೂರದರ್ಶಕದ ದೃಶ್ಯೀಕರಣವು ಭೂಮಿಯಿಂದ 390 ಬೆಳಕಿನ ವರ್ಷಗಳ ದೂರದಲ್ಲಿರುವ ಪ್ರದೇಶದ […]