ನಾಟ್ಯದ ತಲೆಬುಡ ಗೊತ್ತಿಲ್ಲದವರಿಗೆ ಚಾನ್ಸ್ ಕೊಡೋದಕ್ಕಿಂತ ವಿನೋದ್ ರಾಜ್ ಗೆ ಕೊಡಿ: ಟ್ವಿಟರ್ ನಲ್ಲಿ ನಟ ಜಗ್ಗೇಶ್ ಮನವಿ

 ಒಂದು ಕಾಲದಲ್ಲಿ ಡಾನ್ಸಿಂಗ್ ಸ್ಟಾರ್ ಎಂದು ಗುರುತಿಸಿಕೊಂಡಿದ್ದ, ಈಗ ಬಹುತೇಕ ತೆರೆ ಮರೆಗೆ ಸರಿದಿರುವ ನಟ ವಿನೋದ್ ರಾಜ್ ಪರ ನಟ ಜಗ್ಗೇಶ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.  ನಟ ವಿನೋದ್​ ರಾಜ್​ ಬಗ್ಗೆ ಕಳಕಳಿ ವ್ಯಕ್ತಪಡಿಸುವ ಮೂಲಕ ಸಮಾಜಕ್ಕೆ ಸಂದೇಶವೊಂದನ್ನು ರವಾನಿಸಿದ್ದಾರೆ.  ಇಂದಿನ ಡ್ಯಾನ್ಸ್​​​ ಸ್ಟಾರ್​ಗಳು ಹುಟ್ಟವ ಮೊದಲೇ 1987ರಲ್ಲೇ ಕನ್ನಡಿಗರಲ್ಲಿ ಹುಚ್ಚೆಬ್ಬಿಸಿದ್ದ ಪ್ರತಿಭಾವಂತ ನಟ ವಿನೋದ್ ​ರಾಜ್​. ನಾಟ್ಯದ ವ್ಯಾಕರಣ ಅರಿಯದವರನ್ನು ರಿಯಾಲಿಟಿಗೆ ಶೋ ತೀರ್ಪುಗಾರರನ್ನಾಗಿ ಮಾಡುವ ಬದಲು ವಿನೋದ್​ ಅವರ ಪ್ರತಿಭೆಯನ್ನು ಬಳಸಿಕೊಳ್ಳಿ, […]