ಹಲಸಿನ ಹಣ್ಣಿನ ಅಚ್ಚರಿಯೆನಿಸುವ ಆಯುರ್ವೇದೀಯ ಆರೋಗ್ಯ ಪ್ರಯೋಜನಗಳು ಹಲವು
ಆರ್ಟೊಕಾರ್ಪಸ್ ಹೆಟೆರೊಫಿಲ್ಲಸ್ ಎಂಬ ವೈಜ್ಞಾನಿಕ ಹೆಸರು ಹೊಂದಿರುವ ಹಲಸು ಉಷ್ಣವಲಯದ ದೇಶಗಳಾದ ಆಫ್ರಿಕಾ, ಏಷ್ಯಾ ಮತ್ತು ದಕ್ಷಿಣ ಅಮೆರಿಕಾ ದೇಶಗಳಲ್ಲಿ ಯಥೇಚ್ಛವಾಗಿ ಬೆಳೆಯುತ್ತವೆ. ಪ್ರಾಚೀನ ಕಾಲದಿಂದಲೂ ಮಾನವನ ಆಹಾರದ ಭಾಗವಾಗಿರುವ ಹಲಸಿನ ಹಣ್ಣನ್ನು ಸಂಸ್ಕೃತದಲ್ಲಿ ಪಾನಸ ಫಲ ಎಂದು ಕರೆಯಲಾಗುತ್ತದೆ. ಹಲಸು ಬಾಂಗ್ಲಾದೇಶ ಮತ್ತು ಶ್ರೀಲಂಕಾದ ರಾಷ್ಟ್ರೀಯ ಹಣ್ಣಾಗಿದ್ದರೆ, ಭಾರತದ ಕೇರಳ ಮತ್ತು ತಮಿಳುನಾಡಿನಲ್ಲಿ ರಾಜ್ಯ ಹಣ್ಣು ಎನ್ನುವ ಹೆಗ್ಗಳಿಕೆ ಹೊಂದಿದೆ. ಆಯುರ್ವೇದವು ಹಲಸಿನ ಹಣ್ಣಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ಇದು ದೇಹದಲ್ಲಿ ಪಿತ್ತ ಮತ್ತು ವಾತ […]
ಜೂನ್ 17 ರಿಂದ 19 ರ ವರೆಗೆ ಹಲಸು, ಜೇನು ಪ್ರದರ್ಶನ ಮತ್ತು ಮಾರಾಟ ಮೇಳ
ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ, ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಹಲಸು ಹಾಗೂ ಜೇನು ಪ್ರದರ್ಶನ ಮತ್ತು ಮಾರಾಟ ಮೇಳವು ಜೂನ್ 17 ರಿಂದ 19 ರ ವರೆಗೆ ನಗರದ ದೊಡ್ಡಣಗುಡ್ಡೆ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರ ಇಲ್ಲಿನ ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ ನಡೆಯಲಿದೆ. ಮೇಳದಲ್ಲಿ ಹಲಸಿನ ವಿವಿಧ ತಳಿಗಳು, ಹಲಸಿನ ಆಹಾರ ಉತ್ಪನ್ನಗಳು ಹಾಗೂ ಮೌಲ್ಯ ವರ್ಧಿತ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ, ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಜೇನು ಪ್ರದರ್ಶನ […]