ಪಾದೂರಿನಲ್ಲಿ 18.3 ಮಿಲಿಯನ್ ಬ್ಯಾರೆಲ್‌ಗಳ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಸ್ಥಾಪಿಸಲು ಯೋಜನೆ

ನವದೆಹಲಿ: 2029-30ರ ವೇಳೆಗೆ ಭಾರತವು ತನ್ನ ಮೊದಲ ಖಾಸಗಿಯಾಗಿ ನಿರ್ವಹಿಸಲ್ಪಡುವ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ (SPR) ಅನ್ನು ನಿರ್ಮಿಸಲು ಯೋಜಿಸಿದ್ದು, ಇದು ಭಾರತದಲ್ಲಿ ಶೇಖರಿಸಿದ ಎಲ್ಲಾ ತೈಲವನ್ನು ವ್ಯಾಪಾರ ಮಾಡುವ ಸ್ವಾತಂತ್ರ್ಯವನ್ನು ನೀಡುತ್ತದೆ ಎಂದು ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್ (ISPRL) ನ ಮುಖ್ಯ ಕಾರ್ಯನಿರ್ವಾಹಕರು ತಿಳಿಸಿದ್ದಾರೆ. ಕೊರತೆಯ ಸಂದರ್ಭದಲ್ಲಿ ತೈಲದ ಮೊದಲ ಹಕ್ಕನ್ನು ಸರ್ಕಾರ ಹೊಂದಿರುತ್ತದೆ ಎಂದು ಐಎಸ್‌ಪಿಆರ್‌ಎಲ್ ಮುಖ್ಯ ಕಾರ್ಯನಿರ್ವಾಹಕ ಎಲ್.ಆರ್. ಜೈನ್ ಹೇಳಿದ್ದಾರೆ. ಭಾರತವು ಎರಡು ಹೊಸ ಎಸ್‌ಪಿಆರ್‌ಗಳನ್ನು ನಿರ್ಮಿಸಲು ಯೋಜಿಸಿದೆ. […]