2ನೇ ಟಿ20 ಟಾಸ್​ ಗೆದ್ದ ಭಾರತ ಐರ್ಲೆಂಡ್​ ವಿರುದ್ಧ ಬ್ಯಾಟಿಂಗ್​ ಆಯ್ಕೆ

ಡಬ್ಲಿನ್​(ಐರ್ಲೆಂಡ್​) : ಐರ್ಲೆಂಡ್​ ವಿರುದ್ಧ ಡಬ್ಲಿನ್​ನಲ್ಲಿ ನಡೆಯುತ್ತಿರುವ 2ನೇ ಟಿ20 ಪಂದ್ಯದಲ್ಲಿ ಭಾರತ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡಿದೆ.ವೇಗಿ ಜಸ್ಪ್ರೀತ್​ ಬೂಮ್ರಾ ನೇತೃತ್ವದ ತಂಡ ಈ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ ಕೈವಶಕ್ಕೆ ತಂತ್ರ ರೂಪಿಸಿದ್ದರೆ, ಇತ್ತ ಆತಿಥೇಯ ಐರ್ಲೆಂಡ್​ ಕೂಡ ಬಲಿಷ್ಠ ಭಾರತವನ್ನು ಸೋಲಿಸಿ ಸರಣಿ ಸಮಬಲ ಸಾಧಿಸಲು ಸಜ್ಜಾಗಿದೆ. ಮೊದಲ ಪಂದ್ಯದಲ್ಲಿ ನಾಯಕ ಪಾಲ್​ ಸ್ಟಿರ್ಲಿಂಗ್​ ಬ್ಯಾಟಿಂಗ್​ನಲ್ಲಿ ವಿಫಲವಾಗಿದ್ದರು. ಆರಂಭದಲ್ಲೇ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಕರ್ಟಿಸ್ ಕ್ಯಾಂಫರ್ ಮತ್ತು ಬ್ಯಾರಿ ಮೆಕಾರ್ಟಿ […]