ಬಾಲಿವುಡ್ ನ ಖ್ಯಾತ ಕ್ರಿಯಾಶೀಲ ನಟ ಇರ್ಫಾನ್ ಖಾನ್ ಇನ್ನಿಲ್ಲ

ಮುಂಬಯಿ:ಬಾಲಿವುಡ್ ನ ಖ್ಯಾತ ಕ್ರಿಯಾಶೀಲ ನಟ ಇರ್ಫಾನ್ ಖಾನ್(54)  ಬುಧವಾರ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ  ತೀವ್ರ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮುಂಬೈಯ ಕೋಕಿಲ ಬೇನ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ ಇದೀಗ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.ಇರ್ಪಾನ್ ಎರಡು ವರ್ಷದ ಹಿಂದೆ ನ್ಯೂರೋ ಎಂಡೋಕ್ರ್ಐನ್ ಟ್ಯೂಮರ್ ಕ್ಯಾನ್ಸರ್ ಗೆ ತುತ್ತಾಗಿದ್ದರು. ಕಳೆದ ವಾರಷ್ಟೇ ಇವರ ತಾಯಿ ನಿಧನರಾಗಿದ್ದರು. ಇದೀಗ ಮಗನೂ  ಸಾವಿನತ್ತ ಸಾಗಿರುವುದು ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ. ಬಾಲಿವುಡ್ ನ ಶ್ರೇಷ್ಠ ಸಿನಿಮಾಗಳಲ್ಲಿ […]