ಪುನಲೂರು-ಮದುರೈ ಎಕ್ಸ್ಪ್ರೆಸ್ನಲ್ಲಿ ಗ್ಯಾಸ್ ಸಿಲಿಂಡರ್ ಅಕ್ರಮ ಸಾಗಣೆ: ಬೋಗಿಯಲ್ಲಿ ಹೊತ್ತಿಕೊಂಡ ಬೆಂಕಿ; ಕನಿಷ್ಠ ಎಂಟು ಸಾವು
ಚೆನ್ನೈ: ಇಂದು ಬೆಳಗ್ಗೆ 5:15 ಕ್ಕೆ ಪುನಲೂರು-ಮದುರೈ ಎಕ್ಸ್ಪ್ರೆಸ್ನ ಖಾಸಗಿ/ವೈಯಕ್ತಿಕ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆ ನಡೆದಾಗ ರೈಲು ಮದುರೈ ಯಾರ್ಡ್ನಲ್ಲಿತ್ತು. ಆ ಕೂಡಲೇ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದ್ದು, ಮತ್ತೊಂದು ಬೋಗಿಗೆ ಯಾವುದೇ ಹಾನಿಯಾಗದಂತೆ ತಡೆದಿದ್ದಾರೆ. ಪ್ರಯಾಣಿಕರು ಗ್ಯಾಸ್ ಸಿಲಿಂಡರ್ ಅನ್ನು ಕಳ್ಳಸಾಗಣೆ ಮಾಡುತ್ತಿದ್ದುದೇ ಬೆಂಕಿಗೆ ಕಾರಣ ಎಂದು ದಕ್ಷಿಣ ರೈಲ್ವೆ ಅಧಿಕಾರಿ ತಿಳಿಸಿದ್ದಾರೆ. ಘಟನೆಯಲ್ಲಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದರು ಮತ್ತು ಏಳು ಮಂದಿ ಗಾಯಗೊಂಡಿರುವುದಾಗಿ ಮಾಧ್ಯಮ ವರದಿಯಾಗಿದೆ. #WATCH | Tamil […]