ಜೋರ್ಡಾನ್ ಮೇಲಿನ ದಾಳಿಗೆ ಇರಾನ್ ನೆಲೆಗಳ ಮೇಲೆ ಪ್ರತಿದಾಳಿ ನಡೆಸಿದ ಅಮೇರಿಕಾ; ಉಗ್ರ ನೆಲೆ ಧ್ವಂಸ
ಟೆಹ್ರಾನ್: ಇರಾಕ್ ಮತ್ತು ಸಿರಿಯಾದಲ್ಲಿ ಇರಾನ್ ನೆಲೆಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಏರ್‌ಸ್ಟ್ರೈಕ್ ಮಾಡಿದ್ದು, 85 ಗುರಿಗಳ ಮೇಲೆ ದಾಳಿ ನಡೆಸಿದೆ. ಜೋರ್ಡಾನ್ ಮೇಲಿನ ದಾಳಿಗೆ ಅಮೆರಿಕ ಪ್ರತಿದಾಳಿ ಮಾಡಿದ್ದು, ಏಳು ಸ್ಥಳಗಳನ್ನು ಗುರಿಯಾಗಿಸಿ 17 ಉಗ್ರರನ್ನು ಮಟ್ಟಹಾಕಿದೆ. 85 ಇರಾನ್ ರೆವಲ್ಯೂಷನರಿ ಗಾರ್ಡ್ಸ್ ಘಟಕಗಳ ಮೇಲೆ ಅಮೆರಿಕ ವೈಮಾನಿಕ ದಾಳಿ ನಡೆಸಿದೆ. ಕಮಾಂಡ್, ಕಂಟ್ರೋಲ್ ಸೆಂಟರ್, ರಾಕೆಟ್, ಕ್ಷಿಪಣಿ, ಡ್ರೋನ್ ಸಂಗ್ರಹಣಾ ಕೇಂದ್ರ, ಲಾಜಿಸ್ಟಿಕ್ಸ್ ಹಾಗೂ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿ ಇಟ್ಟಿದ್ದ ಸ್ಥಳಗಳನ್ನೇ ಅಮೆರಿಕ ಟಾರ್ಗೆಟ್ ಮಾಡಿದೆ. […]
ಇರಾನ್-ಪಾಕಿಸ್ತಾನ ಮುಖಾಮುಖಿ: ಇರಾನ್ ಮೇಲೆ ಪ್ರತಿದಾಳಿ ನಡೆಸಿದ ಪಾಕಿಸ್ತಾನ
ಇಸ್ಲಾಮಾಬಾದ್: ತನ್ನ ಭಯೋತ್ಪಾದಕ ನೆಲೆಗಳ ಮೇಲೆ ವಾಯುದಾಳಿ ನಡೆಸಿದ ಇರಾನ್ ಮೇಲೆ ಪ್ರತಿದಾಳಿ ಮಾಡುವ ಮೂಲಕ ಪಾಕಿಸ್ತಾನವು ಸೇಡು ತೀರಿಸಿಕೊಂಡಿದೆ. ಪಾಕಿಸ್ತಾನದಲ್ಲಿರುವ ಜೈಶ್ ಅಲ್ ಅದ್ಲ್ ಉಗ್ರ ಸಂಘಟನೆಯ ಎರಡು ನೆಲೆಗಳ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಗೆ ಪ್ರತಿಯಾಗಿ ಪಾಕಿಸ್ತಾನವೂ ವಾಯುದಾಳಿ ಮೂಲಕ ಪ್ರತ್ಯುತ್ತರ ನೀಡಿದೆ. ಇರಾನ್‌ನಲ್ಲಿರುವ ಬಲೂಚಿಸ್ತಾನ ಪ್ರತ್ಯೇಕತಾವಾದಿಗಳ ನೆಲೆಗಳ ಮೇಲೆ ಪಾಕಿಸ್ತಾನವು ಗುರುವಾರ (ಜನವರಿ 18) ವಾಯುದಾಳಿ ನಡೆಸಿದೆ. “ಪಾಕಿಸ್ತಾನ ಕೂಡ ಇರಾನ್ ಮೇಲೆ ವಾಯುದಾಳಿ ನಡೆಸಿದೆ. ಪ್ರತ್ಯೇಕ ಬಲೂಚಿಸ್ತಾನಕ್ಕೆ ಬೇಡಿಕೆ ಇಟ್ಟಿರುವ […]
ಇರಾನ್ ಕ್ಷಿಪಣಿ ದಾಳಿಗೆ ಪಾಕಿಸ್ತಾನದ ಎರಡು ಪ್ರಮುಖ ಉಗ್ರನೆಲೆಗಳು ಧ್ವಂಸ: ಇರಾನ್ ವಿರುದ್ದ ಹರಿಹಾಯ್ದ ಪಾಕಿಸ್ತಾನ
ಟೆಹರಾನ್: ಇರಾಕ್ ಮತ್ತು ಸಿರಿಯಾವನ್ನು ಗುರಿಯಾಗಿಸಲು ಗಣ್ಯ ಕ್ರಾಂತಿಕಾರಿ ಗಾರ್ಡ್‌ಗಳು ದಾಳಿ ನಡೆಸಿದ ಒಂದು ದಿನದ ಬಳಿಕ ಇರಾನ್ ಬುಧವಾರ ಡ್ರೋನ್ ಮತ್ತು ಕ್ಷಿಪಣಿಗಳ ಮೂಲಕ ಪಾಕಿಸ್ತಾನದ ಜೈಶ್ ಅಲ್-ಅದ್ಲ್ ಭಯೋತ್ಪಾದಕ ಗುಂಪಿಗೆ ಸೇರಿದ ಎರಡು ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಬಲವಾದ ಪದಗಳ ಖಂಡನೆಯಲ್ಲಿ, “ತನ್ನ ವಾಯುಪ್ರದೇಶದ ಅಪ್ರಚೋದಿತ ಉಲ್ಲಂಘನೆ” ಯನ್ನು ಪಾಕಿಸ್ತಾನವು ಖಂಡಿಸಿದೆ ಮತ್ತು “ಪರಿಣಾಮಗಳ” ಬಗ್ಗೆ ಇರಾನ್ ಅನ್ನು ಎಚ್ಚರಿಸಿದೆ. ಇರಾನ್ ದಾಳಿಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ […]
ಸುಧೀರ್ಘ ಪ್ರತಿಭಟನೆಗೆ ಮಣಿದ ಇರಾನ್ ಸರ್ಕಾರ: ನೈತಿಕ ಪೊಲೀಸ್ ಗಿರಿ ರದ್ದಿಗೆ ನಿರ್ಧಾರ
ಟೆಹರಾನ್: ದೇಶದ ಕಟ್ಟುನಿಟ್ಟಾದ ಮಹಿಳಾ ವಸ್ತ್ರ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಂಧನಕ್ಕೊಳಗಾದ ಮಹ್ಸಾ ಅಮಿನಿ ಎಂಬ ಮಹಿಳೆಯ ಸಾವಿನಿಂದ ಉಂಟಾದ ಎರಡು ತಿಂಗಳ ಪ್ರತಿಭಟನೆಯ ನಂತರ ಇರಾನ್ ತನ್ನ ನೈತಿಕತೆಯ ಪೊಲೀಸರನ್ನು ರದ್ದುಗೊಳಿಸಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಟೆಹ್ರಾನ್‌ನಲ್ಲಿ ನೈತಿಕತೆಯ ಪೊಲೀಸರು ಬಂಧಿಸಿದ ಮೂರು ದಿನಗಳ ನಂತರ, ಸೆಪ್ಟೆಂಬರ್ 16 ರಂದು ಕುರ್ದಿಷ್ ಮೂಲದ 22 ವರ್ಷದ ಇರಾನಿನ ಮಹಿಳೆ ಮರಣ ಹೊಂದಿದಾಗಿನಿಂದ ಮಹಿಳೆಯರ ನೇತೃತ್ವದ ಪ್ರತಿಭಟನೆಗಳು ಇರಾನ್ ಅನ್ನು ಆವರಿಸಿತ್ತು. ಪ್ರತಿಭಟನಾಕಾರರು ತಮ್ಮ […]
5 ದಶಕಗಳಿಂದ ಸ್ನಾನ ಮಾಡದ ವಿಶ್ವದ ಅತ್ಯಂತ ಕೊಳಕು ವ್ಯಕ್ತಿ 94 ನೇ ವಯಸ್ಸಿನಲ್ಲಿ ನಿಧನ
ಟೆಹ್ರಾನ್: ಸರಿಸುಮಾರು 5 ದಶಕಗಳಿಂದ ಸ್ನಾನ ಮಾಡದಿದ್ದಕ್ಕಾಗಿ “ವಿಶ್ವದ ಅತ್ಯಂತ ಕೊಳಕು ಮನುಷ್ಯ” ಎಂದು ಕರೆಯಲ್ಪಡುತ್ತಿದ್ದ ಇರಾನಿನ ವ್ಯಕ್ತಿಯೊಬ್ಬರು ತಮ್ಮ 94 ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ. ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ ಸ್ನಾನವನ್ನೇ ಮಾಡದ ಅಮೌ ಹಾಜಿ ಭಾನುವಾರ ದೇಜ್ಗಾ ಗ್ರಾಮದಲ್ಲಿ ನಿಧನರಾದರು ಎಂದು ಐ.ಆರ್. ಎನ್. ಎ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಮೌ ಹಾಜಿ ಅವರು “ಅನಾರೋಗ್ಯಕ್ಕೆ ಒಳಗಾಗುವ” ಭಯದಿಂದ ಸ್ನಾನ ಮಾಡುವುದನ್ನು ತಪ್ಪಿಸುತ್ತಿದ್ದರು ಎಂದು ಸ್ಥಳೀಯ […]