ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು-ಅರ್ಜಿ ಆಹ್ವಾನ
ಉಡುಪಿ: ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಬೀಡಿ / ಸುಣ್ಣ ಕಲ್ಲು ಮತ್ತು ಡಾಲೋಮೈಟ್ / ಕಬ್ಬಿಣದ ಗಣಿಗಳು, ಕ್ರೋಮ್, ಮ್ಯಾಂಗನೀಸ್ ಅದಿರಿನ ಗಣಿಗಳು / ಚಲನಚಿತ್ರ ಕ್ಷೇತ್ರ ಇವುಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳಿಗೆ ಪ್ರಸಕ್ತ ಸಾಲಿನಲ್ಲಿ ಶಿಕ್ಷಣಕ್ಕಾಗಿ ಆರ್ಥಿಕ ನೆರವಿನ ಅನುದಾನ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಒಂದನೇ ತರಗತಿಯಿಂದ ಪದವಿ ಕೋರ್ಸ್ವರೆಗೆ, ವೃತ್ತಿಪರ ಹಾಗೂ ವೃತ್ತಿಪರ ರಹಿತ, ಐಟಿಐ ಕೋರ್ಸ್ಗಳಿಗೆ ನ್ಯಾಷನಲ್ ಸ್ಕಾಲರ್ ಷಿಪ್ ಪೋರ್ಟಲ್ https://scholarships.gov.in ಮೂಲಕ ಅರ್ಜಿ ಸಲ್ಲಿಸಬಹುದು. […]