ಹಸು, ಎಮ್ಮೆಗಳಿಗೆ ವಿಮೆ ಭದ್ರತೆ: ಜಾರಕಿಹೊಳಿ
ಬೆಳಗಾವಿ: ರಾಜ್ಯದ 12 ಲಕ್ಷ ಹಸು ಹಾಗೂ ಎಮ್ಮೆಗಳಿಗೆ ವಿಮಾ ಭದ್ರತೆ ಒದಗಿಸಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ವತಿಯಿಂದ ಬೆಳಗಾವಿಯ ಮಹಾಂತೇಶ ನಗರದ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಆವರಣದಲ್ಲಿ ಬುಧವಾರ ನಡೆದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿಮೆಗೆ ಒಳಪಟ್ಟ ರಾಸು ಮೃತಪಟ್ಟಲ್ಲಿ ₹ 40ರಿಂದ ₹ 50ಸಾವಿರ ಪರಿಹಾರವನ್ನು ಹೈನುಗಾರರಿಗೆ ನೀಡಲಾಗುವುದು. ಕೆಎಂಎಫ್ ಹಾಗೂ 14 ಜಿಲ್ಲಾ ಸಹಕಾರಿ ಹಾಲು […]