ಹಾಲಾಡಿಯಲ್ಲಿ ಆಳುಪರ ಕಾಲದ ಅಪರೂಪದ ಶಾಸನ ಪತ್ತೆ: ಪ್ರೊ.ಟಿ. ಮುರುಗೇಶಿ ಅವರಿಂದ ಸಂಶೋಧನೆ
ಉಡುಪಿ: ಕುಂದಾಪುರ ತಾಲೂಕು 76 ಹಾಲಾಡಿಯ ಹುಯ್ಯಾರುವಿನಲ್ಲಿ ಅತಿ ವಿರಳ ಎನ್ನಬಹುದಾದ ಶಾಸನ ಪತ್ತೆಯಾಗಿದೆ. ಹುಯ್ಯಾರು ಪಟೇಲ್ ದಿ.ಹಿರಿಯಣ್ಣ ಶೆಟ್ಟಿ ಕುಟುಂಬಿಕರ ಜಾಗದಲ್ಲಿ ಈ ಶಾಸನವಿದೆ. ಸುಮಾರು 10 ಅಡಿ ಎತ್ತರ, 5 ಅಡಿ ಅಗಲ ಮತ್ತು 3.5 ಇಂಚು ದಪ್ಪ ಗ್ರಾನೈಟ್ ಶಿಲೆಯಲ್ಲಿ ಶಾಸನವನ್ನು ರಚಿಸಲಾಗಿದೆ. ಆಯತಾಕಾರದ ರಚನೆಯನ್ನು ಹೊಂದಿರುವ ಇದರ ಮೇಲ್ಭಾಗವನ್ನು ಕೋನಾಕೃತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಶಾಸನವನ್ನು ಎರಡು ಪಟ್ಟಿಕೆಗಳನ್ನಾಗಿ ವಿಂಗಡಿಸಲಾಗಿದ್ದು, ಮೇಲಿನ ಕೋನಾಕೃತಿಯ ಪಟ್ಟಿಕೆಯ ಮೇಲೆ ಎಂಟು ಸಾಲುಗಳಲ್ಲಿ ಶಾಸನವನ್ನು ಬರೆಯಲಾಗಿದೆ. ಬರವಣಿಗೆ […]