ಜಿಲ್ಲೆಗೆ ಇನ್ಪೋಸಿಸ್ ನಿಂದ 2 ನೇ ಹಂತದಲ್ಲಿ 28.75 ಲಕ್ಷದ ನೆರವು

ಉಡುಪಿ ಏ.16: ಕೋವಿಡ್-19 ವಿರುದ್ದ ಕಾರ್ಯದಲ್ಲಿ ನೆರವಾಗಲು  ಉಡುಪಿ ಜಿಲ್ಲೆಗೆ ಈಗಾಗಲೇ ಇನ್ಪೋಸಿಸ್ ಫೌಂಡೇಶನ್ ವತಿಯಿಂದ 50 ಲಕ್ಷ ಮೌಲ್ಯದ ವೈದ್ಯಕೀಯ ಸಲಕರಣೆಗಳನ್ನು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಮುಂದುವರೆದು ಜಿಲ್ಲೆಗೆ  2 ನೇ ಹಂತದಲ್ಲಿ ,ರೂ.28,75,320 ಮೌಲ್ಯದ , ಗ್ಲೌವ್ಸ್, ಎನ್95 ಫೇಸ್ ಮಾಸ್ಕ್, ಫೇಸ್ ಶೀಲ್ಡ್ ಹಾಗೂ ಪಿಪಿಇ ಕಿಟ್ ಗಳನ್ನು ಇನ್ಪೋಸಿಸ್ ಫೌಂಡೇಶನ್ ವತಿಯಿಂದ ಉಡುಪಿ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಜಿಲ್ಲೆಗೆ ಕೋವಿಡ್ ಕಾರ್ಯಾಚರಣೆಯ ಸಂದರ್ಭದಲ್ಲಿ, ವೈದ್ಯಕೀಯ ಸಲಕರಣೆಗಳು ಅಭಾವವಿರುವ ಸಂದರ್ಭದಲ್ಲಿ, ಜಿಲ್ಲಾಡಳಿತ ಮನವಿಗೆ ತುರ್ತಾಗಿ ಸ್ಪಂದಿಸಿ, […]

ಇನ್ಛೋಸಿಸ್ ನಿಂದ ಉಡುಪಿ ಜಿಲ್ಲಾಡಳಿತಕ್ಕೆ 54 ಲಕ್ಷ ರೂ. ಮೌಲ್ಯದ ವೈದ್ಯಕೀಯ ಸಲಕರಣೆ ಹಸ್ತಾಂತರ

ಉಡುಪಿ: ಇನ್ಛೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾ ಮೂರ್ತಿ ಅವರು ಸುಮಾರು 54 ಲಕ್ಷ ರೂ. ಮೌಲ್ಯದ ವೈದ್ಯಕೀಯ ಸಲಕರಣೆಗಳನ್ನು ಉಡುಪಿ ಜಿಲ್ಲಾಡಳಿತಕ್ಕೆ ಬುಧವಾರ ಹಸ್ತಾಂತರಿಸಿದ್ದಾರೆ. 4,000 ಎನ್95 ಮಾಸ್ಕ್, 4,000 ಸ್ಯಾನಿಟೈಸರ್, 25000ತ್ರಿಪಲ್ ಲೇಯರ್ ಮಾಸ್ಕ್, 10,000ಸರ್ಜಿಕಲ್ ಗ್ಲೌಸ್, 1,500 ಪಿಪಿಇ ಒದಗಿಸಿದ್ದಾರೆ. ಈ ಮೇಲಿನ ವೈದ್ಯಕೀಯ ಉಪಕರಣಗಳನ್ನು ಹಸ್ತಾಂತರಿಸಿದ ಸುಧಾ ಮೂರ್ತಿ‌ ಹಾಗೂ ಡಾ.ರಾಮದಾಸ್ ಕಾಮತ್ ಅವರಿಗೆ ಜಿಲ್ಲಾಧಿಕಾರಿ‌ ಜಿ.ಜಗದೀಶ್ ಕೃತಜ್ಞತೆ ಸಲ್ಲಿಸಿದ್ದಾರೆ.