ಇನ್ಛೋಸಿಸ್ ನಿಂದ ಉಡುಪಿ ಜಿಲ್ಲಾಡಳಿತಕ್ಕೆ 54 ಲಕ್ಷ ರೂ. ಮೌಲ್ಯದ ವೈದ್ಯಕೀಯ ಸಲಕರಣೆ ಹಸ್ತಾಂತರ

ಉಡುಪಿ: ಇನ್ಛೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾ ಮೂರ್ತಿ ಅವರು ಸುಮಾರು 54 ಲಕ್ಷ ರೂ. ಮೌಲ್ಯದ ವೈದ್ಯಕೀಯ ಸಲಕರಣೆಗಳನ್ನು ಉಡುಪಿ ಜಿಲ್ಲಾಡಳಿತಕ್ಕೆ ಬುಧವಾರ ಹಸ್ತಾಂತರಿಸಿದ್ದಾರೆ.
4,000 ಎನ್95 ಮಾಸ್ಕ್, 4,000 ಸ್ಯಾನಿಟೈಸರ್, 25000ತ್ರಿಪಲ್ ಲೇಯರ್ ಮಾಸ್ಕ್, 10,000ಸರ್ಜಿಕಲ್ ಗ್ಲೌಸ್, 1,500 ಪಿಪಿಇ ಒದಗಿಸಿದ್ದಾರೆ.
ಈ ಮೇಲಿನ ವೈದ್ಯಕೀಯ ಉಪಕರಣಗಳನ್ನು ಹಸ್ತಾಂತರಿಸಿದ ಸುಧಾ ಮೂರ್ತಿ‌ ಹಾಗೂ ಡಾ.ರಾಮದಾಸ್ ಕಾಮತ್ ಅವರಿಗೆ ಜಿಲ್ಲಾಧಿಕಾರಿ‌ ಜಿ.ಜಗದೀಶ್ ಕೃತಜ್ಞತೆ ಸಲ್ಲಿಸಿದ್ದಾರೆ.