ಕೈಗಾರಿಕಾ ಕ್ಷೇತ್ರದಲ್ಲಿ ದೇಶ ಹಿಂದೆಂದೂ ಕಾಣದ ಪ್ರಗತಿಯನ್ನು ಸಾಧಿಸಿದೆ: ಲಾಲಾಜಿ ಆರ್ ಮೆಂಡನ್
ಉಡುಪಿ: ದೇಶದಲ್ಲಿ ಈ ಹಿಂದೆ ಶೇ. 70 ರಷ್ಟು ಯುದ್ಧ ಸಾಮಾಗ್ರಿಗಳ ಬಿಡಿ ಭಾಗಗಳನ್ನು ನಾವು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದೆವು. ಆದರೆ, ಇತ್ತೀಚಿನ ದಿನಗಳಲ್ಲಿ ಸೇನಾ ಸಾಮಾಗ್ರಿಗಳು ಹಾಗೂ ಇತರ ಕೈಗಾರಿಕಾ ಬಿಡಿ ಭಾಗಗಳನ್ನು ಭಾರತೀಯ ಕೈಗಾರಿಕಾ ಸಂಸ್ಥೆಗಳೇ ತಯಾರಿಸುತ್ತಿರುವುದು ಕೈಗಾರಿಕಾ ಕ್ಷೇತ್ರದಲ್ಲಿ ದೇಶವು ಪ್ರಗತಿಯತ್ತ ಸಾಗುತ್ತಿರುವುದನ್ನು ತಿಳಿಸುತ್ತಿದೆ ಎಂದು ಶಾಸಕ ಲಾಲಾಜಿ ಆರ್ ಮೆಂಡನ್ ಹೇಳಿದರು. ಅವರು ಸೋಮವಾರ ತಂತ್ರಜ್ಞಾನ ಕೇಂದ್ರಗಳಾಗಿ ಉನ್ನತೀಕರಿಸಿರುವ 150 ಐ.ಟಿ.ಐ ಗಳ ಲೋಕಾರ್ಪಣೆ ಯೋಜನೆಯನ್ನು ಉದ್ಘಾಟಿಸಿದ ಪ್ರಧಾನ ಮಂತ್ರಿ ನರೇಂದ್ರ […]