ಇಂದ್ರಾಳಿ: ಆಟೋ‌ರಿಕ್ಷಾ ಪಲ್ಟಿ 8 ಮಂದಿ‌ ಮಕ್ಕಳಿಗೆ ಗಾಯ

ಉಡುಪಿ: ಮಕ್ಕಳನ್ನು ಕರೆದುಕೊಂಡು ತೆರಳುತ್ತಿದ್ದ ಆಟೋರಿಕ್ಷಾ ಮಗುಚಿ ಬಿದ್ದು, ರಿಕ್ಷಾದಲ್ಲಿದ್ದ 8 ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿರುವ ಘಟನೆ ಮಂಗಳವಾರ ಇಂದ್ರಾಳಿ ಸಮೀಪ ಸಂಭವಿಸಿದೆ. ಗಾಯಗೊಂಡ ಮಕ್ಕಳನ್ನು ಚಿಕಿತ್ಸೆಗಾಗಿ‌ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಿದೆ. ಮಣಿಪಾಲ ಶಾಂತಿನಗರದಿಂದ ಕಡಿಯಾಳಿ ಕಡೆಗೆ ಬರುತ್ತಿದ್ದ ವೇಳೆ ಇಂದ್ರಾಳಿ ಸಮೀಪ ಬೈಕ್ ಸವಾರನೊಬ್ಬ ಬೈಕ್ ಗೆ ದಿಢೀರ್ ಬ್ರೇಕ್ ಹಾಕಿದ್ದು, ಈ ವೇಳೆ ಹಿಂದಿನಿಂದ ಬರುತ್ತಿದ್ದ ಆಟೋರಿಕ್ಷಾ ಚಾಲಕನು ಅನಾಹುತ ತಪ್ಪಿಸಲು ಬ್ರೇಕ್ ಹಾಕಿದ್ದಾನೆ. ಹೀಗಾಗಿ ನಿಯಂತ್ರಣ ಕಳೆದುಕೊಂಡ ರಿಕ್ಷಾ ಮಗುಚಿ ಬಿದ್ದಿದೆ […]