ವಿದ್ಯಾರ್ಥಿನಿಯಂತೆ ಬಂದು ರ್ಯಾಗಿಂಗ್ ಗ್ಯಾಂಗ್ ಅನ್ನು ಪತ್ತೆ ಹಚ್ಚಿದ ರಹಸ್ಯ ಪೊಲೀಸ್: ಇಂದೋರ್ ನಲ್ಲಿ ಸಿನಿಮೀಯ ಕಾರ್ಯಾಚರಣೆ
ಭೋಪಾಲ್: ಥೇಟ್ ವಿದ್ಯಾರ್ಥಿನಿಯಂತೆಯೆ ಕಾಲೇಜಿಗೆ ಬಂದು ಕ್ಯಾಂಪಸ್ ನಲ್ಲಿ ಅಡ್ಡಾಡುತ್ತಿದ್ದ ಆಕೆ ವಿದ್ಯಾರ್ಥಿನಿಯಲ್ಲ, ಬದಲಿಗೆ ರ್ಯಾಗಿಂಗ್ ಬಗ್ಗೆ ಪುರಾವೆಗಳನ್ನು ಸಂಗ್ರಹಿಸುವ ರಹಸ್ಯ ಪೊಲೀಸ್ ಆಗಿದ್ದಳು! ಕಾಲೇಜಿಗೆ ಭೇಟಿ ನೀಡುತ್ತಿದ್ದ ಮೂರು ತಿಂಗಳ ಅವಧಿಯಲ್ಲಿ ಮೊದಲ ವರ್ಷದ ವಿದ್ಯಾರ್ಥಿಗಳ ಕ್ರೂರ ರ್ಯಾಗಿಂಗ್ ನಲ್ಲಿ ಭಾಗಿಯಾಗಿದ್ದ 11 ಹಿರಿಯ ವಿದ್ಯಾರ್ಥಿಗಳನ್ನು ಈಕೆ ಗುರುತಿಸಿದ್ದಾಳೆ. ಇದೀಗ ಆ 11 ಹಿರಿಯ ವಿದ್ಯಾರ್ಥಿಗಳನ್ನು ಮೂರು ತಿಂಗಳ ಕಾಲ ಕಾಲೇಜು ಮತ್ತು ಹಾಸ್ಟೆಲ್ನಿಂದ ಅಮಾನತುಗೊಳಿಸಲಾಗಿದೆ. ಇಂದೋರ್ನ ಮಹಾತ್ಮಾ ಗಾಂಧಿ ಸ್ಮಾರಕ ವೈದ್ಯಕೀಯ ಕಾಲೇಜಿನಲ್ಲಿ ಇತ್ತೀಚೆಗೆ […]