ಇಂದೋರ್: ಮಂದಿರದೊಳಿದ್ದ 100 ವರ್ಷಕ್ಕೂ ಹಳೆಯದಾದ 60 ಅಡಿ ಆಳದ ಬಾವಿಯೊಳಗೆ ಬಿದ್ದು 35 ಜನರ ಸಾವು

ಇಂದೋರ್‌: ಇಲ್ಲಿನ ಸ್ನೇಹ ನಗರದ ಪಟೇಲ್ ನಗರದಲ್ಲಿರುವ ಬೇಲೇಶ್ವರ ಮಹಾದೇವ ದೇವಾಲಯದಲ್ಲಿ 100 ವರ್ಷಕ್ಕೂ ಹಳೆಯದಾದ 60 ಅಡಿ ಆಳದ ಮೆಟ್ಟಿಲುಬಾವಿಯೊಳಗೆ ಹಠಾತ್ತಾಗಿ ಬಿದ್ದು, 35 ಜನರು ಪ್ರಾಣ ಕಳೆದುಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ. ರಾಮನವಮಿಯನ್ನು ಸಂಭ್ರಮದಿಂದ ಆಚರಿಸಲು ದೇವಸ್ಥಾನದಲ್ಲಿ ಜನ ಜಮಾಯಿಸಿದ್ದರು. ತಾವು ಕುಳಿತಿದ್ದ ನೆಲದ ಕೆಳಗೆ 60 ಅಡಿಯ ಬಾವಿ ಇರುವುದು ಅವರಿಗೆ ತಿಳಿದಿರಲಿಲ್ಲ. ಈ ಹಳೆಯ ಬಾವಿಯನ್ನು ತಂತಿ ಜಾಲರಿ ಮತ್ತು ಟೈಲ್ಸ್ ಗಳಿಂದ ಮುಚ್ಚಲಾಗಿತ್ತು. ರಾಮನವಮಿಯಾದ್ದರಿಂದ ಸಾಮರ್ಥ್ಯಕ್ಕಿಂತ ಹೆಚ್ಚು ಜನರು […]