ಇಂಡೋನೇಷ್ಯಾದ ಜಾವದಲ್ಲಿ 5.6 ತೀವ್ರತೆಯ ಭೂಕಂಪ: ಕನಿಷ್ಟ 20ಸಾವು; ಹಲವರಿಗೆ ಗಾಯ

ಜಕಾರ್ತಾ: ಇಂಡೋನೇಷ್ಯಾದ ಪಶ್ಚಿಮ ಜಾವಾ ಪ್ರಾಂತ್ಯದಲ್ಲಿ ಸೋಮವಾರ ಸಂಭವಿಸಿದ 5.6 ತೀವ್ರತೆಯ ಭೂಕಂಪದಲ್ಲಿ ಕನಿಷ್ಟ ಇಪ್ಪತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭೂಕಂಪದ ಕೇಂದ್ರಬಿಂದುವಾಗಿರುವ ಪಶ್ಚಿಮ ಜಾವಾದ ಪಟ್ಟಣದ ಸಿಯಾಂಜೂರ್‌ನ ಸರ್ಕಾರಿ ಅಧಿಕಾರಿ ಹರ್ಮನ್ ಸುಹೆರ್ಮನ್ ಕನಿಶ್ಟ 20 ಜನರು ಸಾವನ್ನಪ್ಪಿದ್ದಾರೆ ಮತ್ತು 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸುದ್ದಿ ವಾಹಿನಿ ಮೆಟ್ರೋ ಟಿವಿಗೆ ತಿಳಿಸಿರುವುದಾಗಿ ವರದಿಯಾಗಿದೆ. ಸೋಮವಾರದ ಭೂಕಂಪವು ರಾಜಧಾನಿ ಜಕಾರ್ತಾದಿಂದ ಆಗ್ನೇಯಕ್ಕೆ 75 ಕಿಮೀ ದೂರದಲ್ಲಿರುವ ಸಿಯಾಂಜೂರ್‌ನಲ್ಲಿ ಮತ್ತು […]

ವಿಶ್ವದ ಅತ್ಯಂತ ದುಬಾರಿ ಸಂಪೂರ್ಣ ಕಪ್ಪು ಕೋಳಿ ಅಯಮ್ ಸೆಮಾನಿ: ಒಂದು ಜೋಡಿ ಬೆಲೆ 5000 ಡಾಲರ್!

ಅಯಮ್ ಸೆಮಾನಿ ಇಂಡೋನೇಷ್ಯಾದಲ್ಲಿ ಕಾಣಸಿಗುವ ಅಪರೂಪದ ಮತ್ತು ತುಲನಾತ್ಮಕವಾಗಿ ಆಧುನಿಕ ಕೋಳಿ ತಳಿಯಾಗಿದೆ. ಇವು ಪ್ರಬಲವಾದ ಜೀನ್ ಅನ್ನು ಹೊಂದಿದ್ದು ಅದು ಹೈಪರ್ಪಿಗ್ಮೆಂಟೇಶನ್ (ಫೈಬ್ರೊಮೆಲನೋಸಿಸ್) ಅನ್ನು ಉಂಟುಮಾಡುತ್ತದೆ, ಇದು ಕೋಳಿಯನ್ನು ಸಂಪೂರ್ಣವಾಗಿ ಕಪ್ಪು ಮಾಡುತ್ತದೆ. ಎಷ್ಟೆಂದರೆ ಇವುಗಳ ಗರಿಗಳು, ಕೊಕ್ಕು, ಮಾಂಸ, ಮೂಳೆಗಳು ಮತ್ತು ಆಂತರಿಕ ಅಂಗಗಳು ಸೇರಿದಂತೆ ಎಲ್ಲವೂ ಕೃಷ್ಣಮಯಂ! ಇಂಡೋನೇಷಿಯನ್ ಭಾಷೆಯಲ್ಲಿ ಅಯಮ್ ಎಂದರೆ “ಕೋಳಿ”, ಸೆಮಾನಿ ಎಂದರೆ (ಮೂಲತಃ ಜಾವಾನೀಸ್ ಪದ) “ಸಂಪೂರ್ಣವಾಗಿ ಕಪ್ಪು” (ಮೂಳೆಗಳವರೆಗೆ). ಒಂದು ಹಕ್ಕಿಯು ನಿಜವಾದ ಆಯಮ್ ಸೆಮಾನಿಯಾಗಲು […]