ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿಂದ ನಾಳೆ ಸಾಹಸ
14 ದಿನಗಳ ಕಾಲ ಚಂದ್ರನ ಮೇಲ್ಮೈಯನ್ನು ಅಧ್ಯಯನ ಮಾಡಿದ್ದ ರೋವರ್ ಹಲವಾರು ಮಾಹಿತಿ ಮತ್ತು ಚಿತ್ರಗಳನ್ನು ಭೂಮಿಗೆ ರವಾನಿಸಿತ್ತು. ಚಂದ್ರನ ಉಷ್ಣಾಂಶವನ್ನು ಲೆಕ್ಕ ಹಾಕಿತ್ತು. ಬಳಿಕ ಕತ್ತಲೆ ಆವರಿಸಿದ್ದರಿಂದ ಸುರಕ್ಷಿತ ಸ್ಥಳದಲ್ಲಿ ಲ್ಯಾಂಡರ್ ಮತ್ತು ರೋವರ್ ಅನ್ನು ಸ್ಲೀಪ್ ಮೋಡ್ಗೆ ಹಾಕಲಾಗಿತ್ತು. ತಲಾ 14 ದಿನ ಕತ್ತಲು, ಬೆಳಕು ಇರಲಿದೆ. ಚಂದ್ರನ ಮೇಲಿನ ಒಂದು ದಿನವು ಭೂಮಿಯ ಮೇಲಿನ 14 ದಿನಗಳಾಗಿರುತ್ತವೆ. ಹೀಗಾಗಿ ಲ್ಯಾಂಡರ್ ಮತ್ತು ರೋವರ್ ಅನ್ನು 14 ದಿನಗಳ ಅವಧಿಗೆ ಕೆಲಸ ಮಾಡುವಂತೆ ರೂಪಿಸಲಾಗಿತ್ತು. […]