ರೂಪಾಯಿಯಲ್ಲೆ ಅಂತರರಾಷ್ಟ್ರೀಯ ವ್ಯಾಪಾರ ಪಾವತಿ: ರೂಪಾಯಿ ಬಲವರ್ಧನೆಗೆ ಆರ್‌ಬಿಐ ಉಪಕ್ರಮ

ನವದೆಹಲಿ: ಇನ್ನು ಮುಂದೆ ಭಾರತೀಯ ರೂಪಾಯಿಯಲ್ಲಿ ವ್ಯಾಪಾರ ಪಾವತಿಗಳನ್ನು ಮಾಡಲು ಆರ್‌ಬಿಐ ಒಂದು ಕಾರ್ಯವಿಧಾನವನ್ನು ಸ್ಥಾಪಿಸಿದೆ. ರೂಪಾಯಿಯಲ್ಲೇ ರಫ್ತು ಮತ್ತು ಆಮದುಗಳ ಇನ್‌ವಾಯ್ಸ್, ಪಾವತಿ ಮತ್ತು ಸೆಟಲ್ ಮೆಂಟ್ ಗಳನ್ನು ನಡೆಸಲು ಕೇಂದ್ರ ಬ್ಯಾಂಕ್ ಈ ಹೆಚ್ಚುವರಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ಕ್ರಮವು ಭಾರತದ ರಫ್ತಿಗೆ ಒತ್ತು ನೀಡುವ ಮೂಲಕ ಜಾಗತಿಕ ವ್ಯಾಪಾರದ ಬೆಳವಣಿಗೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಮತ್ತು ಭಾರತೀಯ ರೂಪಾಯಿಯಲ್ಲಿ ಜಾಗತಿಕ ವ್ಯಾಪಾರ ಸಮುದಾಯದ ಹೆಚ್ಚುತ್ತಿರುವ ಆಸಕ್ತಿಯನ್ನು ಬೆಂಬಲಿಸುತ್ತದೆ. ಈ ಕಾರ್ಯವಿಧಾನವನ್ನು ಜಾರಿಗೆ […]