ಭಾರತೀಯ ವೈದ್ಯಕೀಯ ಸಂಘದ ವಾರ್ಷಿಕ ಕುಟುಂಬ ಸಮ್ಮಿಲನ ಕಾರ್ಯಕ್ರಮ
ಉಡುಪಿ: ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಇದರ ವಾರ್ಷಿಕ ಕುಟುಂಬ ಸಮ್ಮಿಲನ ಕಾರ್ಯಕ್ರಮ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಇತೀಚೆಗೆ ಅಮೃತ ಗಾರ್ಡನ್ ಸಭಾಂಗಣದಲ್ಲಿ ನಡೆಯತು. ಸಂಘದ ಅಧ್ಯಕ್ಷ ಡಾಕ್ಟರ್ ವಿನಾಯಕ ಶೆಣೈ, ಡಾಕ್ಟರ್ ಹರಿಚಂದ್ರ ಹಾಗೂ ಡಾಕ್ಟರ್ ನವೀನ ಬಲ್ಲಾಳ್ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು. ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾಕ್ಟರ್ ಪಿ.ವಿ. ಭಂಡಾರಿ ಅವರನ್ನು ಅಭಿನಂದಿಸಲಾಯಿತು. ಸಂಘದ ೨೫೦ಕ್ಕೂ ಹೆಚ್ಚಿನ ಸದಸ್ಯರು ಮನೋರಂಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.