ಭಾರತೀಯ ಸೇನಾ ಗಡಿಭದ್ರತಾ ಪಡೆಗೆ ಬಲ್ನಾಡಿನ ರಮ್ಯ, ಕಾಣಿಯೂರಿನ ಯೋಗಿತಾ ಎಂ. ಆಯ್ಕೆ
ಯೋಗಿತಾ ಎಂ. ಕಾಣಿಯೂರು ಪುತ್ತೂರು: ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಯುವತಿಯರು ಭಾರತೀಯ ಸೇನಾ ಗಡಿಭದ್ರತಾ ಪಡೆ (ಇಂಡಿಯನ್ ಸೆಕ್ಯುರಿಟಿ ಫೋರ್ಸ್) ಗೆ ಆಯ್ಕೆಯಾಗಿದ್ದಾರೆ. ಪುತ್ತೂರು ತಾಲೂಕಿನ ಬಲ್ನಾಡಿನ ರಮ್ಯ ಹಾಗೂ ಕಡಬ ತಾಲೂಕಿನ ಕಾಣಿಯೂರಿನ ಯೋಗಿತಾ ಅವರು ಬಿಎಸ್ಎಫ್ ಗೆ ಆಯ್ಕೆಯಾಗಿದ್ದು, ಎ.1ರಿಂದ ಸೇನಾ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ತಿಳಿದುಬಂದಿದೆ. ಬಲ್ನಾಡಿನ ರಮ್ಯ: ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಪದ್ಮಯ್ಯ ಗೌಡ ಹಾಗೂ ತೇಜವತಿ ದಂಪತಿಗಳ ಪುತ್ರಿ. ಬಲ್ನಾಡು ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ […]