ಸಿರಾಜ್ ಮ್ಯಾಜಿಕ್: 8ನೇ ಬಾರಿ ಏಶ್ಯಕಪ್ ಮುಡಿಗೇರಿಸಿಕೊಂಡ ಭಾರತ!!
ಏಷ್ಯಾ ಕಪ್ 2023ರ ಫೈನಲ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾವನ್ನು ಬಗ್ಗು ಬಡಿದಿರುವ ಟೀಮ್ ಇಂಡಿಯಾ ಎಂಟನೇ ಬಾರಿಗೆ ಏಷ್ಯಾ ಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಗೆಲ್ಲಲು ಕೇವಲ 51 ರನ್ಗಳ ಗುರಿ ಪಡೆದಿದ್ದ ರೋಹಿತ್ ಪಡೆ, ಯಾವುದೇ ವಿಕೆಟ್ ನಷ್ಟವಿಲ್ಲದೆ 6.1 ಓವರ್ಗಳಲ್ಲಿ ಗುರಿ ತಲುಪಿತು. ಆ ಮೂಲಕ 10 ವಿಕೆಟ್ಗಳ ಭರ್ಜರಿ ಜಯ ಗಳಿಸಿತು. ಮೊಹಮ್ಮದ್ ಸಿರಾಜ್, ಒಂದೇ ಓವರ್ನಲ್ಲಿ ನಾಲ್ಕು ವಿಕೆಟ್ ಕಿತ್ತು ಐತಿಹಾಸಿಕ ಸಾಧನೆ ಮಾಡಿದ್ದಲ್ಲದೇ, ಒಟ್ಟು 21 ರನ್ ನೀಡಿ 6 […]
ಚೀನಾದಿಂದ ಸೋಲಾರ್ ಮಾಡ್ಯೂಲ್ ಆಮದಿನಲ್ಲಿ 76 ಪ್ರತಿಶತ ಕುಸಿತ: ಸ್ವಾವಲಂಬನೆಯತ್ತ ಭಾರತದ ಚಿತ್ತ
ನವದೆಹಲಿ: ಜಾಗತಿಕ ಟ್ರೆಂಡ್ಗಳ ಹೊರತಾಗಿಯೂ, 2023 ರ ಮೊದಲಾರ್ಧದಲ್ಲಿ ಚೀನಾದಿಂದ ಸೋಲಾರ್ ಮಾಡ್ಯೂಲ್ ಆಮದಿನಲ್ಲಿ ಗಣನೀಯ ಪ್ರಮಾಣದ 76 ಪ್ರತಿಶತದಷ್ಟು ಕುಸಿತವನ್ನು ಭಾರತ ದಾಖಲಿಸಿದೆ. ಇದು ಸೌರ ಉತ್ಪಾದನೆಯಲ್ಲಿ ಸ್ವಾವಲಂಬನೆಯತ್ತ ನವದೆಹಲಿಯ ದೃಢವಾದ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೊಸ ವರದಿಯು ಗುರುವಾರ ತಿಳಿಸಿದೆ. ವರ್ಷದಿಂದ ವರ್ಷಕ್ಕೆ, ಚೀನಾದಿಂದ ಭಾರತದ ಸೌರ ಮಾಡ್ಯೂಲ್ ಆಮದುಗಳು 2022 ರ ಮೊದಲಾರ್ಧದಲ್ಲಿ 9.8 GW ನಿಂದ 2023 ರ ಅನುಗುಣವಾದ ಅವಧಿಯಲ್ಲಿ 2.3 GW ಗೆ ಕುಸಿದಿದೆ ಎಂದು ಜಾಗತಿಕ ಶಕ್ತಿ […]
ಇಂಡಿಯಾ ಬದಲಿಗೆ “ಭಾರತ” ಅಧಿಕೃತ ಹೆಸರು? ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಸೂದೆ ಮಂಡನೆ ಸಾಧ್ಯತೆ?
ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸೆಪ್ಟೆಂಬರ್ 18-22 ರಿಂದ ನಿಗದಿಯಾಗಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ದೇಶದ ಅಧಿಕೃತ ಹೆಸರನ್ನು ‘ಇಂಡಿಯಾ’ ಬದಲಿಗೆ ‘ಭಾರತ್’ ಎಂದು ಬದಲಾಯಿಸುವ ನಿರ್ಣಯವನ್ನು ತರುವ ಸಾಧ್ಯತೆಯಿದೆ ಎಂದು ಟೈಮ್ಸ್ ನೌ ಮಂಗಳವಾರ ವರದಿ ಮಾಡಿದೆ. ಭಾರತದ ರಾಷ್ಟ್ರಪತಿಗಳಿಂದ ನೀಡಲಾದ ಅಧಿಕೃತ ಜಿ 20 ಔತಣಕೂಟದ ಆಮಂತ್ರಣಗಳನ್ನು ಸಾಮಾನ್ಯವಾಗಿ ಬರೆಯುವ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲಿಗೆ ‘ಪ್ರೆಸಿಡೆಂಟ್ ಆಫ್ ಭಾರತ್’ ಹೆಸರಿನಲ್ಲಿ ಕಳುಹಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ. ಆದರೆ […]
ಪಾಕಿಸ್ಥಾನ ತಂಡವನ್ನು ಬಗ್ಗು ಬಡಿದು ಏಷ್ಯಾಕಪ್ ಎತ್ತಿ ಹಿಡಿದ ಭಾರತದ ಹಾಕಿ ತಂಡ
ಏಷ್ಯಾ ಕಪ್ ಹಾಕಿ ಫೈನಲ್ನಲ್ಲಿ ಭಾರತವು ಪಾಕಿಸ್ತಾನವನ್ನು ಪೆನಾಲ್ಟಿ ಶೂಟೌಟ್ನಲ್ಲಿಸೋಲಿಸಿ, ಓಮನ್ನ ಸಲಾಲಾದಲ್ಲಿ ನಿನ್ನೆ ನಡೆದ ಪುರುಷರ ಹಾಕಿ 5s ಏಷ್ಯಾ ಕಪ್ 2023 ಅನ್ನು ಗೆದ್ದುಕೊಂಡಿತು. ಈ ಗೆಲುವು FIH ಪುರುಷರ ಹಾಕಿ5 ವಿಶ್ವಕಪ್ ಓಮನ್ 2024 ಗಾಗಿ ಏಷ್ಯಾದ ಅರ್ಹತಾ ಪಂದ್ಯಾವಳಿಯಾಗಿ ಕಾರ್ಯನಿರ್ವಹಿಸಿತು. ಮೂರು ಕೂಟಗಳಲ್ಲಿ ಭಾರತ ಹಾಕಿ 5s ಮಾದರಿಯಲ್ಲಿ ಪಾಕಿಸ್ತಾನವನ್ನು ಸೋಲಿಸಿದ್ದು ಇದೇ ಮೊದಲು. ದ್ವಿತೀಯಾರ್ಧದಲ್ಲಿ 2-4 ರ ಹಿನ್ನಡೆಯಿಂದ, ಭಾರತದ ಮೊಹಮ್ಮದ್ ರಹೀಲ್ ಎರಡು ಗೋಲುಗಳ ನಂತರ ಪಂದ್ಯವನ್ನು ಶೂಟೌಟ್ಗೆ […]
ಏಷ್ಯಾಕಪ್ 2023: ಟಾಸ್ ಗೆದ್ದ ಭಾರತ; ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ
2023ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದು, ಟೀಂ ಇಂಡಿಯಾ ಟಾಸ್ ಗೆದ್ದಿದ್ದು ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಮಾಡಿದ್ದಾರೆ. 4 ವರ್ಷಗಳ ಬಳಿಕ ಇತ್ತಂಡಗಳು ಏಕದಿನ ಕ್ರಿಕೆಟ್ ನಲ್ಲಿ ಮುಖಾಮುಖಿಯಾಗಿವೆ. 2019ರ ವಿಶ್ವಕಪ್ನಲ್ಲಿ ಕೊನೆಯ ಬಾರಿಗೆ ತಂಡಗಳು ಎದುರುಬದುರಾಗಿದ್ದವು. ಭಾರತ ತಂಡವು ಮೂರು ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್ಗಳೊಂದಿಗೆ ಕಣಕ್ಕಿಳಿದಿದೆ. ಅನುಭವಿ ವೇಗಿ ಮೊಹಮ್ಮದ್ ಶಮಿ ಬದಲಿಗೆ ಶಾರ್ದೂಲ್ ಠಾಕೂರ್ ಸ್ಥಾನ ಪಡೆದಿದ್ದಾರೆ. ಭಾರತದ […]