ಇಂಡಿಯಾ ಬದಲಿಗೆ “ಭಾರತ” ಅಧಿಕೃತ ಹೆಸರು? ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಸೂದೆ ಮಂಡನೆ ಸಾಧ್ಯತೆ?

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸೆಪ್ಟೆಂಬರ್ 18-22 ರಿಂದ ನಿಗದಿಯಾಗಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ದೇಶದ ಅಧಿಕೃತ ಹೆಸರನ್ನು ‘ಇಂಡಿಯಾ’ ಬದಲಿಗೆ ‘ಭಾರತ್’ ಎಂದು ಬದಲಾಯಿಸುವ ನಿರ್ಣಯವನ್ನು ತರುವ ಸಾಧ್ಯತೆಯಿದೆ ಎಂದು ಟೈಮ್ಸ್ ನೌ ಮಂಗಳವಾರ ವರದಿ ಮಾಡಿದೆ.

ಭಾರತದ ರಾಷ್ಟ್ರಪತಿಗಳಿಂದ ನೀಡಲಾದ ಅಧಿಕೃತ ಜಿ 20 ಔತಣಕೂಟದ ಆಮಂತ್ರಣಗಳನ್ನು ಸಾಮಾನ್ಯವಾಗಿ ಬರೆಯುವ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲಿಗೆ ‘ಪ್ರೆಸಿಡೆಂಟ್ ಆಫ್ ಭಾರತ್’ ಹೆಸರಿನಲ್ಲಿ ಕಳುಹಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ. ಆದರೆ ಅವರು ಸರ್ಕಾರದ ಈ ನಡೆಯನ್ನು ಟೀಕಿಸಿದ್ದಾರೆ.

Image

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸೇರಿದಂತೆ ಹಲವು ಬಿಜೆಪಿ ನಾಯಕರು ಮಂಗಳವಾರ ದೇಶಕ್ಕೆ ‘ಭಾರತ್’ ಎಂದು ಮರುನಾಮಕರಣ ಮಾಡುವುದನ್ನು ಬೆಂಬಲಿಸಿದ್ದಾರೆ.

ಇತ್ತೀಚೆಗೆ ಆರ್.ಎಸ್.ಎಸ್ ನಾಯಕ ಮೋಹನ್ ಭಾಗವತ್ ಕೂಡಾ ಇಂಡಿಯಾ ಬದಲಿಗೆ ‘ಭಾರತ’ ಎನ್ನುವ ಹೆಸರನ್ನು ಬಳಸುವಂತೆ ಕರೆ ನೀಡಿದ್ದರು.

ಕಾಂಗ್ರೆಸ್ ಸೇರಿದಂತೆ ಪತ್ರಿಪಕ್ಷಗಳು ಈ ನಡೆಯನ್ನು ಟೀಕಿಸಿವೆ.