ಬರ್ಲಿನ್‌ನ ಬ್ರಾಂಡೆನ್‌ಬರ್ಗ್ ಗೇಟ್‌ನಲ್ಲಿ ಭಾರತದ ರಂಗು: ಭಾರತದ ಪ್ರಧಾನಿಗೆ ಭರ್ಜರಿ ಸ್ವಾಗತ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 3 ದಿನಗಳ ಯುರೋಪ್ ಪ್ರವಾಸಕ್ಕಾಗಿ ಸೋಮವಾರ (ಮೇ 2) ಜರ್ಮನಿಗೆ ತಲುಪುತ್ತಿದ್ದಂತೆ, ಭಾರತೀಯ ನಾಯಕನನ್ನು ಸ್ವಾಗತಿಸಲು ಬರ್ಲಿನ್‌ನ ಸಾಂಪ್ರದಾಯಿಕ ನಗರ ಬ್ರಾಂಡೆನ್‌ಬರ್ಗ್ ಗೇಟ್‌ನಲ್ಲಿ ಭಾರತದ ರಂಗು ಮತ್ತು ವೈವಿಧ್ಯತೆಯನ್ನು ಪ್ರದರ್ಶಿಸಲಾಯಿತು. The colours and diversity of India are on display at Berlin’s iconic Brandenburg Gate. pic.twitter.com/nhBECQVLEp — PMO India (@PMOIndia) May 2, 2022 ಹೃದಯಸ್ಪರ್ಶಿ ಸ್ವಾಗತದ ಚಿತ್ರಗಳು ಮತ್ತು ವೀಡಿಯೊವನ್ನು ಪ್ರಧಾನ […]

ಭಾರತದಲ್ಲಿ ಬ್ಯಾನ್, ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಟಿಕ್ ಟಾಕ್ ಫ್ಯಾನ್! ಐತಿಹಾಸಿಕ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ಶೀರ್ಷಿಕೆ ಪ್ರಾಯೋಜಕತ್ವ ವಹಿಸಿದ ಟಿಕ್ ಟಾಕ್

  ದೆಹಲಿ: ಭಾರತ ಮತ್ತು ಚೀನಾ ಮಧ್ಯೆ ಗಡಿ ತಕರಾರು ಉಲ್ಭಣಗೊಂಡ ನಂತರ ಎರಡು ದೇಶಗಳ ನಡುವಿನ ಸಂಬಂಧ ಹದಗೆಟ್ಟಿದ್ದು, ಚೀನಾ ವಸ್ತುಗಳ ಮತ್ತು ಚೀನೀ ಅಪ್ಲಿಕೇಷನ್ ಗಳ ಮೇಲೆ ನಿರ್ಬಂಧ ಹೇರಲಾಗಿದೆ. ಭಾರತವು ಬ್ಯಾನ್ ಮಾಡಿರುವ ಚೀನೀ ಅಪ್ಲಿಕೇಷನ್ ಗಳಲ್ಲಿ ಟಿಕ್ ಟಾಕ್ ಕೂಡಾ ಒಂದಾಗಿದೆ. ಟಿಕ್ ಟಾಕ್ ನಂತಹ ಅಪ್ಲಿಕೇಷನ್ ಗಳಿಂದ ದೇಶದ ಆಂತರಿಕ ಭದ್ರತೆಗೆ ಅಪಾಯವಾಗುವ ಸಾಧ್ಯತೆಗಳು ಹೆಚ್ಚಿದ್ದು, ಇಂತಹ ಅಪ್ಲಿಕೇಷನ್ ಗಳನ್ನು ಭಾರತವು ಬ್ಯಾನ್ ಮಾಡಿದೆ. ಚೀನೀ ಅಪ್ಲಿಕೇಷನ್ ಗಳ ಮೇಲೆ […]

ಇಂದು ಅಂತರಾಷ್ಟ್ರೀಯ ಮಾತೃಭಾಷಾ ದಿನ: ಮಾತೃ ಭಾಷೆಯಲ್ಲಿ ಮಾತನಾಡೋಣ… ಸಂಸ್ಕೃತಿ ಉಳಿಸೋಣ….

  ಹೊಸದಿಲ್ಲಿ: ಪ್ರತಿ ವರ್ಷ ಫೆಬ್ರವರಿ 21ನ್ನು ಅಂತರಾಷ್ಟ್ರೀಯ ಮಾತೃಭಾಷಾ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆ ಮತ್ತು ಬಹುಭಾಷಾ ಸಂಸ್ಕೃತಿಯನ್ನು ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಭಾಷೆ ಕೇವಲ ಸಂವಹನ ಸಾಧನ ಮಾತ್ರವಲ್ಲ; ಇದು ವಿಶಾಲವಾದ ಸಾಂಸ್ಕೃತಿಕ ಮತ್ತು ಬೌದ್ಧಿಕ ಪರಂಪರೆಯನ್ನು ಪ್ರತಿನಿಧಿಸುತ್ತದೆ. ಭಾರತದಲ್ಲಿ 2022 ರಲ್ಲಿ ಮುನ್ನೆಲೆಗೆ ಬಂದಿರುವ ವಿಷಯ “ಬಹುಭಾಷಾ ಕಲಿಕೆಗಾಗಿ ತಂತ್ರಜ್ಞಾನವನ್ನು ಬಳಸುವುದು: ಸವಾಲುಗಳು ಮತ್ತು ಅವಕಾಶಗಳು”. ಬಹುಭಾಷಾ ಶಿಕ್ಷಣವನ್ನು ಮುಂದುವರಿಸಲು ಮತ್ತು ಎಲ್ಲರಿಗೂ ಗುಣಮಟ್ಟದ ಬೋಧನೆ ಮತ್ತು […]

ತಾಂತ್ರಿಕ ದೋಷ: ಚಂದ್ರಯಾನ-2 ರಾಕೆಟ್ ಉಡಾವಣೆ ರದ್ದು

ಶ್ರೀಹರಿಕೋಟ: ತಾಂತ್ರಿಕ ಕಾರಣಗಳಿಂದ ಚಂದ್ರಯಾನ-2 ಉಡಾವಣೆ ತಾತ್ಕಾಲಿಕ ರದ್ದು ಮಾಡಲಾಗಿದೆ. ಉಡಾವಣೆಗೆ ಕೆಲವೇ ನಿಮಿಷಗಳು ಬಾಕಿ ಇರುವಾಗ ಇಸ್ರೋ ಈ ನಿರ್ಧಾರ ಪ್ರಕಟಿಸಿದ್ದು ಸದ್ಯದಲ್ಲೇ ಉಡಾವಣೆಯ ಮುಂದಿನ ದಿನಾಂಕವನ್ನು ಘೋಷಿಸುವ ಸಾಧ್ಯತೆ ಇದೆ. ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಜಿಎಸ್ ಎಲ್ ವಿ ಮಾಕ್-3 ಬಾಹುಬಲಿ ಉಢಾವಣಾ ವಾಹನದಲ್ಲಿ ಗಗನನೌಕೆ ಸಾಗಬೇಕಾಗಿತ್ತು. ಚಂದ್ರನೆಡೆಗೆ ವಿಶೇಷತೆ ಚಂದ್ರಯಾನದಲ್ಲಿ ರೋವರ್ ಚಲನೆಗೆ ನೆರವಾಗಲು ಕಾನ್ಪುರ ಐಐಟಿ ವಿಜ್ಞಾನಿಗಳು ವಿಶೇಷ ತಂತ್ರಾಂಶ ರೂಪಿಸಿದ್ದಾರೆ. ಚಲನೆಗೆ ನೆರವಾಗಲು ವಿಶೇಷ ಮೋಷನ್ ಪ್ಲ್ಯಾನಿಂಗ್ […]

ವಿಶ್ವಕಪ್ 2019: ನಾಳೆ ಇಂಡೋ-ಪಾಕ್ ವಾರ್, ಟೀಂ‌ ಇಂಡಿಯಾ ಗೆಲುವಿನ ಫೇವರಿಟ್

ಲಂಡನ್: 2019ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವಿನ ಪಂದ್ಯಕ್ಕೆ ಕೌಂಟ್‍ಡೌನ್ ಆರಂಭವಾಗಿದ್ದು, ಈ ತಂಡಗಳು ಜೂ. 16ರಂದು ಮುಖಾಮುಖಿಯಾಗಲಿವೆ. ಏಷ್ಯಾದ ರಾಷ್ಟ್ರಗಳ ಈ ಪಂದ್ಯಾಟವನ್ನು ವೀಕ್ಷಿಸಲು ವಿಶ್ವ ಕ್ರಿಕೆಟ್ ಅಭಿಮಾನಿಗಳು ಕಾತರರಾಗಿದ್ದಾರೆ. ಎರಡು ತಂಡಗಳ ಬಲಾಬಲ ನೋಡುವುದಾದರೆ ನಾಳೆಯ ಪಂದ್ಯದಲ್ಲಿ ಟೀಂ ಇಂಡಿಯಾವೇ ಗೆಲ್ಲುವ ಫೇವರಿಟ್ ಆಗಿದೆ. 2015ರ ವಿಶ್ವಕಪ್ ಬಳಿಕ ಪಾಕಿಸ್ತಾನ ಮತ್ತು ಭಾರತದ ತಂಡಗಳು ನಾಲ್ಕು ಭಾರೀ ಮುಖಾಮುಖಿಯಾಗಿದೆ. ಇತ್ತೀಚಿನ ಪಂದ್ಯಗಳ ಫಲಿತಾಂಶವನ್ನು ಗಮನಿಸಿದರೆ 2006ರ ಬಳಿಕ ಎರಡು ತಂಡಗಳು 30 ಪಂದ್ಯಗಳನ್ನು […]