ಜನಸಂಖ್ಯಾ ಸ್ಪೋಟ: 2023 ರಲ್ಲಿ ಚೀನಾ ಹಿಂದಿಕ್ಕಿ ಅತಿ ಹೆಚ್ಚು ಜನಸಂಖ್ಯೆ ಹೊಂದುವ ರಾಷ್ಟ್ರವಾಗಲಿದೆ ಭಾರತ!

ನವದೆಹಲಿ: ವಿಶ್ವ ಜನಸಂಖ್ಯಾ ದಿನದಂದು ವಿಶ್ವಸಂಸ್ಥೆಯ ವರದಿಯ ಪ್ರಕಾರ ಭಾರತ ಮುಂದಿನ ವರ್ಷ ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಹೊರಹೊಮ್ಮಲಿದೆ ಎಂದು ಅಂದಾಜಿಸಲಾಗಿದೆ. 2022 ರ ನವೆಂಬರ್ ಮಧ್ಯದ ವೇಳೆಗೆ ವಿಶ್ವದ ಜನಸಂಖ್ಯೆಯು ಎಂಟು ಶತಕೋಟಿ ತಲುಪುವ ಮುನ್ಸೂಚನೆ ಇದೆ ಎಂದು ಸಂಸ್ಥೆಯು ಹೇಳಿದೆ. ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ವಿಭಾಗ, ಜನಸಂಖ್ಯಾ ವಿಭಾಗದ ವರ್ಲ್ಡ್ ಪಾಪ್ಯುಲೇಶನ್ ಪ್ರಾಸ್ಪೆಕ್ಟ್ಸ್ 2022, ಜಾಗತಿಕ ಜನಸಂಖ್ಯೆಯು ನವೆಂಬರ್ 15, 2022 ರಂದು ಎಂಟು […]

ಆಜಾದಿ ಕಾ ಅಮೃತ್ ಮಹೋತ್ಸವ್: ಭಾರತೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಿರುವ ಯುಕೆ

ಭಾರತದ 75 ನೇ ಸ್ವಾತಂತ್ರ್ಯ ವಾರ್ಷಿಕೋತ್ಸವದ ಆಚರಣೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ನಿಂದ ಬ್ರಿಟನ್‌ನಲ್ಲಿ ಅಧ್ಯಯನ ಮಾಡಲು ಭಾರತೀಯ ವಿದ್ಯಾರ್ಥಿಗಳಿಗೆ 75 ಸಂಪೂರ್ಣ ಅನುದಾನಿತ ವಿದ್ಯಾರ್ಥಿವೇತನವನ್ನು ನೀಡಲು ಯುಕೆ ಸರ್ಕಾರವು ನಿರ್ಧರಿಸಿದ್ದು, ಭಾರತದಲ್ಲಿನ ಪ್ರಮುಖ ಕಂಪನಿಗಳೊಂದಿಗೆ ಪಾಲುದಾರಿಕೆ ನಡೆಸಿದೆ. ಇಲ್ಲಿಯವರೆಗೆ ಒಂದು ವರ್ಷದ ಸ್ನಾತಕೋತ್ತರ ಕಾರ್ಯಕ್ರಮಕ್ಕಾಗಿ ನೀಡಲಾದ ಅತಿ ಹೆಚ್ಚು ಸಂಖ್ಯೆಯ ಸಂಪೂರ್ಣ ಅನುದಾನಿತ ವಿದ್ಯಾರ್ಥಿವೇತನ ಇದಾಗಿದೆ ಎಂದು ಬ್ರಿಟಿಷ್ ಹೈ ಕಮಿಷನ್ ಹೇಳಿದೆ. ಎಚ್‌ಎಸ್‌ಬಿಸಿ, ಪಿಯರ್ಸನ್ ಇಂಡಿಯಾ, ಹಿಂದೂಸ್ತಾನ್ ಯೂನಿಲಿವರ್, ಟಾಟಾ ಸನ್ಸ್ ಮತ್ತು ಡ್ಯುಯೊಲಿಂಗೋ ಮುಂತಾದ ಕಂಪನಿಗಳು […]

ಟಿ20 ಪವರ್‌ಪ್ಲೇ ಐರ್ಲೆಂಡ್ ವರ್ಸಸ್ ಭಾರತ: ಅತ್ಯಾಧಿಕ ವಿಕೆಟ್ ಕಬಳಿಸಿ ಭುವನೇಶ್ವರ್ ಕುಮಾರ್ ವಿಶ್ವ ದಾಖಲೆ

ಡಬ್ಲಿನ್‌ನಲ್ಲಿ ನಡೆದ ಭಾರತ ಮತ್ತು ಐರ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್‌ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಭಾರತದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಇತಿಹಾಸ ನಿರ್ಮಿಸಿ ದೊಡ್ಡ ವಿಶ್ವ ದಾಖಲೆ ಬರೆದಿದ್ದಾರೆ. ಭುವಿ, ತಮ್ಮ 3 ಓವರ್‌ಗಳ ಕೋಟಾದಲ್ಲಿ 16 ರನ್‌ಗಳನ್ನು ನೀಡಿ ವಿಕೆಟ್ ಪಡೆದರು, ಈ ಸಮಯದಲ್ಲಿ ಅವರು ಒಂದು ಮೇಡನ್ ಓವರ್ ನೀಡಿದ್ದಾರೆ. ಭುವನೇಶ್ವರ್ ಪವರ್‌ಪ್ಲೇನಲ್ಲಿ ಐರ್ಲೆಂಡ್ ವಿರುದ್ಧ ಏಕೈಕ ವಿಕೆಟ್ ಪಡೆದಿದ್ದಾರೆ. ಈಗ ಟಿ20 ಕ್ರಿಕೆಟ್‌ನ […]

ಭಾರತದಿಂದ ಅಫ್ಘಾನಿಸ್ತಾನಕ್ಕೆ 3000 ಮೆಟ್ರಿಕ್ ಟನ್ ಗೋಧಿ ರವಾನೆ

ನವದೆಹಲಿ: ಶನಿವಾರದಂದು ಭಾರತವು 3,000 ಮೆಟ್ರಿಕ್ ಟನ್ ಗೋಧಿಯನ್ನು ಮತ್ತೊಮ್ಮೆ ಅಫ್ಘಾನಿಸ್ತಾನಕ್ಕೆ ಕಳುಹಿಸಿಕೊಟ್ಟಿದೆ. ಅಫ್ಘಾನ್ ಜನರಿಗೆ ಮಾನವೀಯ ನೆರವು ನೀಡುವ ಭಾರತದ ಬದ್ಧತೆ ಅಚಲವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ. ಇಲ್ಲಿಯವರೆಗೆ, ಭಾರತವು ವಿಶ್ವ ಆಹಾರ ಕಾರ್ಯಕ್ರಮದ ಸಹಭಾಗಿತ್ವದಲ್ಲಿ ಅಫ್ಘಾನಿಸ್ತಾನಕ್ಕೆ 33,500 ಮೆಟ್ರಿಕ್ ಟನ್ ಗೋಧಿ ಸಾಗಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಬೂದು ಬಣ್ಣದ ನವಿಲಿನ ಅಂದ ಚಂದ ನೋಡಿರಾ…. ಇದು ಏಷ್ಯಾ ಖಂಡದಲ್ಲಿ ಮಾತ್ರ ಕಾಣಸಿಗುವ ಪಕ್ಷಿ

ಬೂದು ನವಿಲು-ಫೆಸೆಂಟ್ (ಪಾಲಿಪ್ಲೆಕ್ಟ್ರಾನ್ ಬೈಕಲ್ಕಾರಟಮ್), ಈಶಾನ್ಯ ಭಾರತ, ಚೀನಾ ಮತ್ತು ಇಂಡೋ-ಚೀನಾದಲ್ಲಿ ಕಂಡುಬರುವ ಗ್ಯಾಲಿಫಾರ್ಮ್ಸ್ ಪಕ್ಷಿಯಾಗಿದೆ. ಈ ನವಿಲು ಮ್ಯಾನ್ಮಾರ್‌ನ ರಾಷ್ಟ್ರೀಯ ಪಕ್ಷಿಯಾಗಿದೆ. ಗ್ಯಾಲಿಫಾರ್ಮ್ಸ್ ಸುಮಾರು 70 ಕುಲಗಳು ಮತ್ತು 250 ಕ್ಕೂ ಹೆಚ್ಚು ಜಾತಿಗಳನ್ನು ಒಳಗೊಂಡಿರುವ ಒಂದು ದೊಡ್ಡ ಮತ್ತು ವೈವಿಧ್ಯಮಯ ಪಕ್ಷಿಗಳ ಗುಂಪಾಗಿದೆ. ಈ ಗುಂಪಿನ ಪಕ್ಷಿಗಳನ್ನು ‘ಗ್ಯಾಲಿನೇಶಿಯಸ್ ಬರ್ಡ್ಸ್’ (ಕೋಳಿಯಂತಹ ಪಕ್ಷಿ) ಅಥವಾ ಆಟದ ಪಕ್ಷಿಗಳು (ಅನೇಕ ಜಾತಿಗಳನ್ನು ಬೇಟೆಯಾಡಲಾಗುತ್ತದೆ) ಎಂದು ಕರೆಯಲಾಗುತ್ತದೆ. ಗ್ಯಾಲಿಫಾರ್ಮ್ಸ್ ಟರ್ಕಿ, ಕೋಳಿಗಳು, ಕ್ವಿಲ್ ಮತ್ತು ಇತರ ಭೂಪಕ್ಷಿಗಳನ್ನು […]