ಟಿ20 ಪವರ್‌ಪ್ಲೇ ಐರ್ಲೆಂಡ್ ವರ್ಸಸ್ ಭಾರತ: ಅತ್ಯಾಧಿಕ ವಿಕೆಟ್ ಕಬಳಿಸಿ ಭುವನೇಶ್ವರ್ ಕುಮಾರ್ ವಿಶ್ವ ದಾಖಲೆ

ಡಬ್ಲಿನ್‌ನಲ್ಲಿ ನಡೆದ ಭಾರತ ಮತ್ತು ಐರ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್‌ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಭಾರತದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಇತಿಹಾಸ ನಿರ್ಮಿಸಿ ದೊಡ್ಡ ವಿಶ್ವ ದಾಖಲೆ ಬರೆದಿದ್ದಾರೆ. ಭುವಿ, ತಮ್ಮ 3 ಓವರ್‌ಗಳ ಕೋಟಾದಲ್ಲಿ 16 ರನ್‌ಗಳನ್ನು ನೀಡಿ ವಿಕೆಟ್ ಪಡೆದರು, ಈ ಸಮಯದಲ್ಲಿ ಅವರು ಒಂದು ಮೇಡನ್ ಓವರ್ ನೀಡಿದ್ದಾರೆ.

ಭುವನೇಶ್ವರ್ ಪವರ್‌ಪ್ಲೇನಲ್ಲಿ ಐರ್ಲೆಂಡ್ ವಿರುದ್ಧ ಏಕೈಕ ವಿಕೆಟ್ ಪಡೆದಿದ್ದಾರೆ. ಈಗ ಟಿ20 ಕ್ರಿಕೆಟ್‌ನ ಮೊದಲ 6 ಓವರ್‌ಗಳಲ್ಲಿ ವಿಕೆಟ್ ಪಡೆದು ಪ್ರಮುಖ ಆಟಗಾರರಾಗಿದ್ದಾರೆ. ಈ ವಿಚಾರದಲ್ಲಿ ಅವರೀಗ ಸ್ಯಾಮ್ಯುಯೆಲ್ ಬದ್ರಿ ಹಾಗೂ ಟಿಮ್ ಸೌಥಿ ಅವರನ್ನು ಹಿಂದಿಕ್ಕಿದ್ದಾರೆ. ಆತಿಥೇಯರ ನಾಯಕ ಆಂಡ್ರ್ಯೂ ಬಲ್ಬಿರ್ನಿ ಅವರನ್ನು ಮೊದಲ ಓವರ್‌ನ 5 ನೇ ಎಸೆತದಲ್ಲಿ ಭುವಿ ಬೌಲ್ಡ್ ಮಾಡಿ ಪೆವಿಲಿಯನ್ ಹಾದಿ ತೋರಿಸಿದ್ದಾರೆ. ಭುವಿ ಈಗ ಟಿ20 ಪವರ್‌ಪ್ಲೇನಲ್ಲಿ 34 ವಿಕೆಟ್‌ಗಳನ್ನು ಹೊಂದಿದ್ದು, ಮೊದಲ 6 ಓವರ್‌ಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

34 ವಿಕೆಟ್ – ಭುವನೇಶ್ವರ್ ಕುಮಾರ್
33 ವಿಕೆಟ್ – ಸ್ಯಾಮ್ಯುಯೆಲ್ ಬದ್ರಿ
33 ವಿಕೆಟ್ – ಟಿಮ್ ಸೌಥಿ
27 ವಿಕೆಟ್ – ಶಕೀಬ್ ಅಲ್ ಹಸನ್
27 ವಿಕೆಟ್ – ಜೋಶ್ ಹೇಜಲ್‌ವುಡ್

ಭುವನೇಶ್ವರ್ ಕುಮಾರ್ ಅವರ ಟಿ20 ವೃತ್ತಿಜೀವನವನ್ನು ನೋಡಿದರೆ, ಅವರು ಕ್ರಿಕೆಟ್‌ನ ಚಿಕ್ಕ ಪಂದ್ಯಗಳಲ್ಲಿ ಆಡಿದ 65 ಪಂದ್ಯಗಳಲ್ಲಿ ಅದೇ ಸಂಖ್ಯೆಯ ವಿಕೆಟ್‌ಗಳನ್ನು ಪಡೆದಿದ್ದಾರೆ. 24 ರನ್‌ಗಳಿಗೆ 5 ವಿಕೆಟ್‌ ಕಬಳಿಸಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ.