ಭಾರತ ಹಿಂದಿನಂತೆಯೇ ಅಫ್ಗನ್ನರ ಪರವಾಗಿ ನಿಲ್ಲಲಿದೆ: ಜೈಶಂಕರ್

ನವದೆಹಲಿ: ಅಫ್ಘಾನಿಸ್ತಾನವು ಗಂಭೀರವಾದ ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಭಾರತವು ಹಿಂದಿನಂತೆಯೇ ಅಘ್ಗನ್ನರ ಪರವಾಗಿ ನಿಲ್ಲಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ವಿಶ್ವಸಂಸ್ಥೆಯ ಉನ್ನತಮಟ್ಟದ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಅವರು, ನೆರೆಯ ರಾಷ್ಟ್ರವಾಗಿ ಭಾರತವು ಅಲ್ಲಿನ ಬೆಳವಣಿಗೆಗಳನ್ನು ಗಮನಿಸುತ್ತಿದೆ. ಅಫ್ಘಾನಿಸ್ತಾನಕ್ಕೆ ಸಹಾಯ ಮಾಡಲು ಸಾಧ್ಯವಾದಷ್ಟು ಉತ್ತಮವಾದ ವಾತಾವರಣವನ್ನು ಸೃಷ್ಟಿಸಲು ಅಂತರರಾಷ್ಟ್ರೀಯ ಸಮುದಾಯವು ಒಗ್ಗೂಡಬೇಕು ಎಂದೂ ಜೈಶಂಕರ್ ಕರೆ ನೀಡಿದರು.