ಭಾರತ ಹಿಂದುಗಳ ದೇಶ: ರಾಹುಲ್ ಗಾಂಧಿ
ಜೈಪುರ: ಭಾರತ ಹಿಂದುಗಳ ದೇಶವೇ ಹೊರತು, ಅಧಿಕಾರದ ಹಪಾಹಪಿ ಹೊಂದಿರುವ ಹಿಂದುತ್ವವಾದಿಗಳದ್ದಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿರುವ ಅವರು, ಭಾರತದ ರಾಜಕಾರಣದಲ್ಲಿ ಸದ್ಯ ಹಿಂದು ಮತ್ತು ಹಿಂದುತ್ವವಾದ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಇವುಗಳ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ನಾನು ಹಿಂದು. ಆದರೆ, ಹಿಂದುತ್ವವಾದಿಯಲ್ಲ ಎಂದರು. ಹಿಂದುತ್ವವಾದಿಗಳು ಕೇವಲ ಅಧಿಕಾರಕ್ಕಾಗಿ ಜೀವಿಸುವವರು. ಅವರು ಅಧಿಕಾರಕ್ಕಾಗಿ ಏನುಬೇಕಾದರೂ ಮಾಡಲಾರರು. ಅಧಿಕಾರದ ಲಾಲಸೆ ಹೊಂದಿರುವ ಹಿಂದುತ್ವವಾದಿಗಳು 2014ರಿಂದಲೂ ದೇಶದಲ್ಲಿ ಅಧಿಕಾರದಲ್ಲಿದ್ದಾರೆ. […]