ಖಡ್ಗಕ್ಕಿಂತ ಹರಿತದ ಲೇಖನಿಯಲ್ಲ, ಇದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದ 20 ಅಡಿ ಉದ್ದದ ಲೇಖನಿ!!
ಸಾಗರ: ಸಾಗರದ ಆವಿನಹಳ್ಳಿಯ ಗಣೇಶ್ ಹಾರ್ಡ್ವೇರ್ ಮತ್ತು ಜೈಗಣೇಶ್ ವುಡ್ವರ್ಕ್ ಮಾಲೀಕ, ಕುಶಲಕರ್ಮಿ ಕೃಷ್ಣಮೂರ್ತಿ ಆಚಾರ್ ಅವರು ತಯಾರಿಸಿರುವ ಈ ಪೆನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಪ್ರವೇಶಗಿಟ್ಟಿಸಿದೆ. ಹತ್ತು ವರ್ಷಗಳ ಹಿಂದೆ ತಯಾರಿಸಿರುವ ಈ ಪೆನ್ನು 20 ಅಡಿ ಉದ್ದವಿದೆ. ಈ ಲೇಖನಿ ಭಾರತದಲ್ಲೇ ದಾಖಲೆ ಬರೆದಿದೆ. ಅರ್ಥಾತ್, ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ತಯಾರಾದ ಈ 20 ಅಡಿ ಉದ್ದದ ಲೇಖನಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಸಿಕ್ಕಿದೆ. ನವದೆಹಲಿಯಲ್ಲಿ […]
ಕೊಡವೂರು: ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದ ಕಲಾವಿದ ಗಗನ್ ಜೆ ಸುವರ್ಣ ಇವರಿಗೆ ಗೌರವಾರ್ಪಣೆ
ಕೊಡವೂರು: ಜ್ಞಾನೇಂದ್ರ ಸುವರ್ಣ ಹಾಗೂ ವಾಣಿ ದಂಪತಿಗಳ ಪುತ್ರನಾದ ಗಗನ್ ಜೆ ಸುವರ್ಣ ಇವರು ಸ್ಟ್ರಿಂಗ್ ಆರ್ಟ್ (ನೂಲು ಕಲೆ)ನಲ್ಲಿ ವಿಶಿಷ್ಟ ಸಾಧನೆ ಮಾಡಿದ್ದು, ಇವರನ್ನು ಕೊಡವೂರಿನ ನಾಗರಿಕರ ಪರವಾಗಿ ಗೌರವಿಸುವ ಕಾರ್ಯ ನಡೆಯಿತು. ಗಗನ್ ಇವರು ಉಡುಪಿಯ ಪೂರ್ಣ ಪ್ರಜ್ಞಾ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಾ ಇದ್ದು, ಸುಮಾರು 200 ಸಣ್ಣ ಕಬ್ಬಿಣದ ಮೊಳೆಗಳನ್ನು ಹಾಗೂ 2,500 ನೂಲಿನ ಉಂಡೆಗಳನ್ನು ಉಪಯೋಗಿಸಿ ಕಾಂತಾರ ಸಿನಿಮಾದ ಪುಟ್ಟ ಪ್ರತಿಕೃತಿಯನ್ನು ರಚಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ […]