ಡೆಲ್ಟಾ ರೂಪಾಂತರ ತಳಿಯ ಸೋಂಕು ಹೆಚ್ಚುವ ಸಾಧ್ಯತೆ: ವಿಶ್ವಸಂಸ್ಥೆ ಆರೋಗ್ಯ ಸಂಸ್ಥೆ ಎಚ್ಚರಿಕೆ

ಜಿನಿವಾ: ಕೊರೊನಾ ಸೋಂಕಿನ ರೂಪಾಂತರ ತಳಿ ‘ಡೆಲ್ಟಾ ವೈರಸ್’ ವಿಶ್ವದ 100 ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಈ ರೂಪಾಂತರ ತಳಿಯ ಸೋಂಕು ಎಲ್ಲೆಡೆ ಹರಡುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಕೋವಿಡ್‌–19 ಪಿಡುಗು ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆ ವಾರದ ದತ್ತಾಂಶ ಪ್ರಕಟಿಸಿದ್ದು, ಅದರಂತೆ ಜೂನ್ 29 ರವರೆಗೆ, 96 ದೇಶಗಳಲ್ಲಿ ಡೆಲ್ಟಾ ರೂಪಾಂತರ ತಳಿಯ ಸೋಂಕು ಪ್ರಸರಣಗೊಂಡಿದೆ. ರೂಪಾಂತರ ತಳಿಗಳ ಪತ್ತೆಗೆ ಅಗತ್ಯವಾದ ಪರಿಕರಗಳ ಕೊರತೆಯ ಕಾರಣವೂ ಡೆಲ್ಟಾ ರೂಪಾಂತರ ತಳಿ […]