ಪಾರ್ಲೆ ಉತ್ಪನ್ನಗಳ ಬೆಲೆ ಹೆಚ್ಚಳ

ನವದೆಹಲಿ: ಬಿಸ್ಕತ್ತು ತಯಾರಿಕಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಪಾರ್ಲೆ ಪ್ರಾಡಕ್ಟ್ಸ್‌ ಕಂಪೆನಿಯೂ ತನ್ನ ಉತ್ಪನ್ನಗಳ ಬೆಲೆಯನ್ನು ಏರಿಕೆ ಮಾಡಿದೆ. ಅದರಂತೆ ಪಾರ್ಲೆ ಉತ್ಪನ್ನಗಳ ದರದಲ್ಲಿ ಶೇ. 5ರಿಂದ ಶೇ 10ರವರೆಗೆ ಹೆಚ್ಚಳವಾಗಿದೆ. ಸಕ್ಕರೆ, ಗೋಧಿ, ಖಾದ್ಯ ತೈಲದ ಬೆಲೆ ಹೆಚ್ಚಳ ಆಗಿರುವ ಕಾರಣ ಉತ್ಪನ್ನಗಳ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದು ಕಂಪನಿ ಹೇಳಿದೆ. ಪಾರ್ಲೆ–ಜಿ, ಹೈಡ್‌ ಆ್ಯಂಡ್‌ ಸೀಕ್, ಕ್ರ್ಯಾಕ್‌ಜಾಕ್‌ನಂತಹ ಬಿಸ್ಕತ್ತುಗಳ ಬೆಲೆಯಲ್ಲಿ ಶೇ 5ರಿಂದ ಶೇ 10ರಷ್ಟು, ಕೇಕ್ ಮತ್ತು ರಸ್ಕ್‌ಗಳ ಬೆಲೆಯನ್ನು ಶೇ 7ರಿಂದ ಶೇ […]