ಬೈಕಾಡಿ ಮಂದಾರ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಆಯೋಜಿಸಿದ್ದ “ರಂಗೋತ್ಸವ” ಕಾರ್ಯಕ್ರಮ ಉದ್ಘಾಟನೆ

ಬ್ರಹ್ಮಾವರ: ಮಂದಾರ(ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಗಾಂಧಿನಗರ- ಬೈಕಾಡಿಯವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ ಆಯೋಜಿಸಿದ್ದ “ರಂಗೋತ್ಸವ” ಕಾರ್ಯಕ್ರಮವು ಎ.8 ರಂದು ನಾದ ಮಣಿನಾಲ್ಕೂರು ಅವರ ಅರಿವಿನ ಹಾಡುಗಳೊಂದಿಗೆ ಎಸ್.ಎಮ್.ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಉದ್ಘಾಟನೆಗೊಂಡಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ಮನೋವೈದ್ಯರಾದ ಡಾ.ಪಿ.ವಿ ಭಂಡಾರಿಯವರು ನಾಟಕವೂ ಕೂಡ ಒಂದು ಮನೋಚಿಕಿತ್ಸೆಯೇ ಆಗಿದೆ ಮತ್ತು ಅದು ಶಿಸ್ತು ಹಾಗೂ ಬದ್ಧತೆಯಿಂದ ವ್ಯಕ್ತಿತ್ವ ರೂಪಿಸಿಕೊಳ್ಳಲು ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಮತ್ತೋರ್ವ […]